ಗೋಡೆ ಕುಸಿದು ಮಹಿಳೆ ಸಾವು

ಪರ್ವಿನ್ ಬೇಫಾರಿ
ಪರ್ವಿನ್ ಬೇಫಾರಿ
Published on
ಬೆಳಗಾವಿ: ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಗೋಡೆ ಕುಸಿದು ಬಿದ್ದ ಪರಿಣಾಮ ಪತ್ನಿ ಮೃತಪಟ್ಟು, ಪತಿ ಗಾಯಗೊಂಡಿರುವ ಘಟನೆ ತಾಲೂಕಿನ ಹೊಸೂರ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ.
ವಂಟಮುರಿ ಗ್ರಾಮದ ಪರ್ವಿನ್ ಬೇಫಾರಿ(34) ಮೃತ ಮಹಿಳೆ.
ಪತಿ ಶರೀಫ್ ಬದುಕುಳಿದಿದ್ದಾರೆ.
ಹಳ್ಳಿ ಹಳ್ಳಿ ತಿರುಗಿ ಬೈಕ್ ಮೇಲೆ ಕೋಳಿ ಮಾರಾಟ ಮಾಡುತ್ತಿದ್ದ ದಂಪತಿ ಮಂಗಳವಾರ ಮಳೆ ಹೆಚ್ಚಾದ ಹಿನ್ನೆಲೆ ಹೂಸೂರ ಗ್ರಾಮದ ಪಾಳು ಮನೆಯೊಂದರಲ್ಲಿ ನಿಂತಿದ್ದರು. ಈ ವೇಳೆ ಏಕಾಏಕಿ ಗೋಡೆ ಕುಸಿದು ಬಿದ್ದು ಪರ್ವೀನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಗಾಯಗೊಂಡಿರುವ ಶರೀಫ್ ಗೆ ಬಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಕಾಕತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net