ವಿದ್ಯುತ್ ತಗುಲಿ ಮಹಿಳೆ ಸಾವು

ಮಹಿಳೆ ಸಾವು
ಮಹಿಳೆ ಸಾವು
Published on
ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಖೋತನಹಟ್ಟಿ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶಿಸಿ ವೈಷ್ಣವಿ ಮೋಹನ ಮೋರೆ (25) ಮೃತಪಟ್ಟ ಘಟನೆ ಗುರುವಾರ ನಡೆದಿದೆ.
ಪಂಪ್‌ಸೆಟ್ ಮೂಲಕ ಮನೆಗೆ ನೀರು ತುಂಬಿಕೊಳ್ಳಲು ಮೋಟರ್ ಆರಂಭಿಸಲು ಹೋದಾಗ ವಿದ್ಯುತ್ ತಗುಲಿದ್ದ ವೈಷ್ಣವಿಯನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮೃತಪಟ್ಟಿದ್ದಾರೆಂದು ಪ್ರಕರಣ ದಾಖಲಿಸಿಕೊಂಡಿರುವ ಐಗಳಿ ಠಾಣೆ ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಅಥಣಿ ತಹಸೀಲ್ದಾರ್ ಸಿದ್ದರಾಯ ಬೋಸಗಿ, ಹವಾಲ್ದಾರ್ ಲಕ್ಷ್ಮಣ ಅಜ್ಜಣಗಿ, ತನಿಖಾ ಸಹಾಯಕಿ ಸುಮಿತ್ರ ಹರಗಿ ಭೇಟಿ ನೀಡಿ ಪರಿಶೀಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net