ವಿಶ್ವೇಶ್ವರಯ್ಯ ದೂರದೃಷ್ಟಿ ಸರ್ವಕಾಲಕ್ಕೂ ಅನ್ವಯ

ಬೆಳಗಾವಿಯಲ್ಲಿ ಹಮ್ಮಿಕೊಂಡಿದ್ದ ಇಂಜಿನಿಯರ್ಸ್‌ ದಿನ ಕಾರ್ಯಕ್ರಮದಲ್ಲಿ ಸಿ.ಬಿ.ಹಿರೇಮಠ, ಡಾ.ಸಚಿನ ಸಬನೀಸ್, ಬಿ.ಜಿ.ಧರಣ್ಣೆ ಇತರರಿದ್ದರು.
ಬೆಳಗಾವಿಯಲ್ಲಿ ಹಮ್ಮಿಕೊಂಡಿದ್ದ ಇಂಜಿನಿಯರ್ಸ್‌ ದಿನ ಕಾರ್ಯಕ್ರಮದಲ್ಲಿ ಸಿ.ಬಿ.ಹಿರೇಮಠ, ಡಾ.ಸಚಿನ ಸಬನೀಸ್, ಬಿ.ಜಿ.ಧರಣ್ಣೆ ಇತರರಿದ್ದರು.
Published on
ಬೆಳಗಾವಿ: ಸರ್ ಎಂ.ವಿಶ್ವೇಶ್ವರಯ್ಯನವರು ಇಂಜಿನಿಯರಿಂಗ್, ಕೈಗಾರಿಕೆ ಹಾಗೂ ಆರ್ಥಿಕ ವಲಯದಲ್ಲಿ ಮಾಡಿದ ಸಾಧನೆ ಹಾಗೂ ಅವರ ದೂರದೃಷ್ಟಿ ಇಂದಿನ ಇಂಜಿನಿಯರ್‌ಗಳಿಗೆ ಮಾರ್ಗದರ್ಶಿಯಾಗಿವೆ. ಅವರು ತೋರಿದ ಮಾರ್ಗದಲ್ಲಿ ನಡೆಯುವುದೇ ಅವರಿಗೆ ಸಲ್ಲಿಸಬಹುದಾದ ಗೌರವವಾಗಿದೆ ಎಂದು ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್‌ ಸ್ಥಾನಿಕ ಕೇಂದ್ರದ ಅಧ್ಯಕ್ಷ ಸಿ.ಬಿ.ಹಿರೇಮಠ ಹೇಳಿದರು.
ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್‌ ಸ್ಥಾನಿಕ ಕೇಂದ್ರದಲ್ಲಿ ಮಂಗಳವಾರ ವಿಶ್ವೇಶ್ವರಯ್ಯನವರ 166ನೇ ಜನ್ಮದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಇಂಜಿನಿಯರ್ಸ್‌ ದಿನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂಜಿನಿಯರ್‌ಗಳು ಅಳವಡಿಸಿಕೊಳ್ಳಬೇಕಿರುವ ಕೌಶಲಗಳ ಕುರಿತು ವಿವರಿಸಿದರು.
ಏರೋ ಆಪರೇಷನ್ಸ್ ಏಕಸ್ ಎಚ್‌ಆರ್ ವಿಭಾಗದ ಮುಖ್ಯಸ್ಥ ನಾಗೇಶ ‘ಉತ್ಕೃಷ್ಟ ತಂತ್ರಜ್ಞಾನದಿಂದ ಸುಸ್ಥಿರ ಹಾಗೂ ತಾಂತ್ರಿಕ ಸ್ವಾಯತ್ತ ಭಾರತ’, ಎಸ್.ವೈ.ಕುಂದರಗಿ ‘ತಾಂತ್ರಿಕ ಸ್ವಾಯತ್ತತೆ’ ಕುರಿತು ಮಾತನಾಡಿದರು.
ಬೆಳಗಾವಿ ಫೆರೋಕಾಸ್ಟ್ ಎಂಡಿ ಡಾ.ಸಚಿನ ಸಬನಿಸ್, ಡಾ.ಎಸ್.ಎಫ್.ಪಾಟೀಲ, ಪ್ರವೀಣ ಹುಲಜಿ,
ವಿ.ಎಲ್.ಹೊಂಗಲ, ಆರ್.ಬಿ.ಪಾಟೀಲ, ಎಂ.ಎಸ್.ಬುರ್ಜಿ, ವಿ.ಎಚ್.ಜೋಶಿಯವರನ್ನು ಸನ್ಮಾನಿಸಲಾಯಿತು.
ಲೋಕೋಪಯೋಗಿ ಇಲಾಖೆಯ ನಿವೃತ್ತ ಕಾರ್ಯನಿರ್ವಾಹಕ ಇಂಜಿನಿಯರ್ ಬಿ.ಜಿ.ಧರಣ್ಣೆ, ಬಿ.ಎಂ.ಕಳ್ಳಿಗುಡ್ಡ, ಡಾ.ಪ್ರವೀಣ ಘೋರ್ಪಡೆ, ಡಾ.ವೆಂಟಕೇಶ ಇತರರಿದ್ದರು. ವಿಲಾಸ ಬದಾಮಿ ಸ್ವಾಗತಿಸಿದರು.
ಪ್ರೊ.ಮಂಜುನಾಥ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net