ಜನಕಲ್ಯಾಣಕ್ಕೆ ಶ್ರಮಿಸುತ್ತಿದೆ ವೀರಶೈವ ಧರ್ಮ

ಹುಕ್ಕೇರಿ ತಹಸೀಲ್ದಾರ್ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಚಂದ್ರಶೇಖರ ಶಿವಾಚಾರ್ಯರು, ಬ್ರಹ್ಮಾನಂದ ಶ್ರೀಗಳು, ಪವನ ಕತ್ತಿ, ಮಹಾವೀರ ನಿಲಜಗಿ ಇತರರಿದ್ದರು.
ಹುಕ್ಕೇರಿ ತಹಸೀಲ್ದಾರ್ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಚಂದ್ರಶೇಖರ ಶಿವಾಚಾರ್ಯರು, ಬ್ರಹ್ಮಾನಂದ ಶ್ರೀಗಳು, ಪವನ ಕತ್ತಿ, ಮಹಾವೀರ ನಿಲಜಗಿ ಇತರರಿದ್ದರು.
Published on
ಹುಕ್ಕೇರಿ: ಜಗದ್ಗುರು ರೇಣುಕಾಚಾರ್ಯರು ಸ್ಥಾಪಿಸಿದ ವೀರಶೈವ ಧರ್ಮದ ತತ್ತ್ವಗಳು ಮಾನವಕುಲದ ಕಲ್ಯಾಣಕ್ಕೆ ಶ್ರಮಿಸುತ್ತಿವೆ. ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಉಕ್ತಿ ಸಾರಿದ ಏಕೈಕ ಧರ್ಮ ವೀರಶೈವ. ಮಾನವ ಸಂತತಿ ಇರುವವರೆಗೂ ಧರ್ಮಕ್ಕೆ ಅಳಿವಿಲ್ಲ ಎಂದು ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ಪವನ ಕತ್ತಿ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಾ.ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, ಸಂಸ್ಕಾರ ಕೊಟ್ಟದ್ದು ವೀರಶೈವ ಪುರಾತನ ಧರ್ಮ. ಜಗತ್ತ್ತಿಗೆ ಒಳ್ಳೆಯ ಆಚಾರ, ವಿಚಾರಗಳ ಸಂಸ್ಕೃತಿ ಕೊಟ್ಟಿದ್ದು ವೀರಶೈವ ಧರ್ಮ ಎಂದರು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಜಲಯೋಗದಲ್ಲಿ ವಿಶ್ವ ದಾಖಲೆ ಬರೆದ ಡಾ.ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿಗೆ ಪ್ರಶಸ್ತಿ ಪ್ರದಾನ ಮಾಡಿರುವುದು ಹೆಮ್ಮೆಯ ಸಂಗತಿ ಎಂದರು. ತಹಸೀಲ್ದಾರ್ ಬಲರಾಮ ಕಟ್ಟಿಮನಿ, ಬಿಇಒ ಪ್ರಭಾವತಿ ಪಾಟೀಲ, ಕೋಚರಿಯ ಸೂರ್ಯಕಾಂತ ನಾಯಿಕ ಮಾತನಾಡಿದರು.
ಶ್ರೀರಂಗಪಟ್ಟಣದ ಚಂದ್ರವನ ಬೇಬಿ ಮಠದ ಡಾ.ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಅವರಿಗೆ ಜಗದ್ಗುರು ರೇಣುಕಾಚಾರ್ಯ ಸದ್ಭಾವನಾ ಪ್ರಶಸ್ತಿ ಪ್ರದಾನ ಮಾಡಿದರು. ರೇಣುಕಾಚಾರ್ಯರ ಭಾವಚಿತ್ರದ ಮೆರವಣಿಗೆ ಜರುಗಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ತುಮಕೂರಿನ ಬಸವರಾಜ ಗುರೂಜಿ, ವೈದಿಕ ಪಾಠಶಾಲೆಯ ಸಂಪತ್ ಕುಮಾರ ಶಾಸ್ತ್ರಿ, ಯರನಾಳದ ಮುಕುಂದ ಮಠದ ಮತ್ತು ಕೋಚರಿಯ ಸೂರ್ಯಕಾಂತ ನಾಯಿಕ ದಂಪತಿಯನ್ನು ಸನ್ಮಾನಿಸಲಾಯಿತು.
ಯರನಾಳ ಕಾಳಿಕಾ ಆಶ್ರಮದ ಗುರು ಬ್ರಹ್ಮಾನಂದ ಶ್ರೀಗಳು, ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಅಧ್ಯಕ್ಷ ಮಹಾವೀರ ನಿಲಜಿಗಿ, ಮುಖಂಡರಾದ ಶೀತಲ ಬ್ಯಾಳಿ, ಚನ್ನಪ್ಪ ಗಜಬರ, ಪ್ರಭು ವಂಟಮೂರಿ, ಬಸವರಾಜ ಗಂಗನ್ನವರ, ಸಿದ್ಧಲಿಂಗಯ್ಯ ಹಿರೇಮಠ, ಸಿಡಿಪಿಒ ಹೊಳೆಪ್ಪ ಎಚ್., ಉಪ ತಹಸೀಲ್ದಾರ್ ಎನ್.ಆರ್.ಪಾಟೀಲ, ಶಿವಲೀಲಾ ಗವಿಮಠ, ಸುರೇಶ ಜಿನರಾಳಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net