ಆರೋಗ್ಯ ಕ್ಷೇತ್ರದಲ್ಲಿ ವ್ಯಾಪಕ ಬದಲಾವಣೆ

ಬೆಳಗಾವಿ ನಗರದ ಕೆಎಲ್‌ಇ ಔಷಧೀಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಗಣ್ಯರು ಉದ್ಘಾಟಿಸಿದರು. ಡಾ.ವಾಣಿಶ್ರೀ ಬುಬನಾಳೆ, ಡಾ.ಸುನೀಲ ಜಲಾಲಪುರ, ಡಾ.ನವೀನ ಎನ್. ಇತರರಿದ್ದರು.
ಬೆಳಗಾವಿ ನಗರದ ಕೆಎಲ್‌ಇ ಔಷಧೀಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಗಣ್ಯರು ಉದ್ಘಾಟಿಸಿದರು. ಡಾ.ವಾಣಿಶ್ರೀ ಬುಬನಾಳೆ, ಡಾ.ಸುನೀಲ ಜಲಾಲಪುರ, ಡಾ.ನವೀನ ಎನ್. ಇತರರಿದ್ದರು.
Published on
ಬೆಳಗಾವಿ: ನಗರದ ಕೆಎಲ್‌ಇ ಔಷಧೀಯ ಮಹಾವಿದ್ಯಾಲಯ, ಆರೋಗ್ಯ ಶಿಕ್ಷಣ ವಿಭಾಗ ಹಾಗೂ ಕಾಹೆರ ಸಂಯುಕ್ತಾಶ್ರಯದಲ್ಲಿ ಬುಧವಾರ ಆರೋಗ್ಯ ಸೇವಾ ವೃತ್ತಿಪರರಿಗಾಗಿ ಸಹಕಾರಾತ್ಮಕ ತರಬೇತಿ ಎಂಬ ವಿಷಯದ ಕಾರ್ಯಾಗಾರ ಜರುಗಿತು. ಯುಡಿಇಎಚ್‌ಪಿ ಸಂಯೋಜಕಿ ಡಾ.ವಾಣಿಶ್ರೀ ಬುಬನಾಳೆ ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿದ್ದು, ಪರಸ್ಪರ ಸಹಕಾರಾತ್ಮಕ ಶಿಕ್ಷಣದ ಮಹತ್ವ ಮುಖ್ಯವಾಗಿದೆ ಎಂದರು. ಡಾ.ನವೀನ ಎನ್. ಮಾತನಾಡಿ, ವಿವಿಧ ಕ್ಷೇತ್ರಗಳ ಆರೋಗ್ಯ ವೃತ್ತಿಪರರ ನಡುವೆ ಸಹಕಾರ ಮತ್ತು ಸಮನ್ವಯ ಅತ್ಯಂತ ಮುಖ್ಯ ಎಂದರು. ಪ್ರಾಂಶುಪಾಲ ಡಾ.ಸುನೀಲ ಜಲಾಲಪುರ ಮಾತನಾಡಿ, ಇಂತಹ ಕಾರ್ಯಾಗಾರ ಆರೋಗ್ಯ ವೃತ್ತಿಪರರ ನಡುವೆ ಅಂತರ್ ವಿಭಾಗೀಯ ಕಲಿಕೆ ಮತ್ತು ಸಹಕಾರಾತ್ಮಕ ಕಾರ್ಯಪದ್ಧತಿ ಉತ್ತೇಜಿಸುತ್ತವೆ ಎಂದರು. ಡಾ.ಗೀತಾಂಜಲಿ ಸಾಲಿಮಠ, ಡಾ.ಬಿ.ಎಂ.ದಿನ್ನಿಮಠ, ಡಾ.ಎಂ.ಎಸ್.ಪಲ್ಲೇದ, ಡಾ.ವಿ.ಎಸ್.ಮಾಸ್ತಿಹೋಳಿಮಠ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net