ದೇವಸ್ಥಾನವನ್ನು ಹಸಿರು ತೋರಣ, ಬಣ್ಣಬಣ್ಣದ ಹೂವಿನ ಅಲಂಕಾರಗಳಿಂದ ಸಿಂಗರಿಸಲಾಗಿತ್ತು. ತಿರುಮಲ ತಿರುಪತಿ ದೇವಸ್ಥಾನದಲ್ಲಿ ನಡೆವ ಪೂಜಾ ವಿಧಿಗಳ ಮಾದರಿಯಲ್ಲೇ ಶ್ರೀ ವೆಂಕಟೇಶ್ವರ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಪ್ರಧಾನ ಅರ್ಚಕ ಈಶ್ವರಯ್ಯ ಶಾಸ್ತ್ರೀ, ವೆ.ಮೂ. ಮಂಜುನಾಥ ಶಾಸ್ತ್ರೀ, ಸಂಕೇತ ಹಿರೇಮಠ ಅವರ ನೇತೃತ್ವದಲ್ಲಿ ಪೂಜಾ ವಿಧಿನಗಳು ನೆರವೇರಿದವು.
ಪುರುಷ ಸೂಕ್ತ ಸಹಿತ ಶ್ರೀ ಸುತ ಮಹಾಭಿಷೇಕ, ವಿಷ್ಣು ಸಹಸ್ರನಾಮಾವಳಿ ಪಠಣ, ಕುಂಕುಮಾರ್ಚನೆ, ಮಹಾಮಂಗಳಾರತಿ ಜರುಗಿತು. ಶ್ರೀ ಲಕ್ಷ್ಮೀ ವೆಂಕಟೇಶ್ವರ ಪದ್ಮಾವತಿ ಸೇವಾ ಸಮಿತಿ ಅಧ್ಯಕ್ಷ ಪುಂಡಲೀಕ ರಾಯಚೂರ, ಕಾರ್ಯದರ್ಶಿ ಚಂದ್ರಶೇಖರ ಕರ್ನೂಲ ಇದ್ದರು.