ಅಪಘಾತದಲ್ಲಿ ಇಬ್ಬರ ಸಾವು

ಸಾವು
ಸಾವು
Published on
ಅಥಣಿ ಗ್ರಾಮೀಣ: ಅಥಣಿ ವಿಜಯಪುರ ರಸ್ತೆ ಮೇಲೆ ಬೈಕ್ ಮಗುಚಿದ ಪರಿಣಾಮ ಅಥಣಿ ತಾಲೂಕಿನ ಬುರ್ಲಟ್ಟಿ ಗ್ರಾಮದ ಸುನೀಲ ನಿಂಗಪ್ಪ ಚೌಗಲಾ (42), ಬಸವರಾಜ ಮುರಗೆಪ್ಪ ಖೋತ (42) ಮೃತಪಟ್ಟಿದ್ದಾರೆ.
ಏ. 25ರಂದು ಅಥಣಿ ಪಟ್ಟಣದಿಂದ ಸ್ವಗ್ರಾಮಕ್ಕೆ ಬೈಕ್ ಮೇಲೆ ಹೋಗುತ್ತಿದ್ದಾಗ ಘಟನೆ ನಡೆದಿದೆ. ಸುನೀಲ ಸ್ಥಳದಲ್ಲೇ ಮೃತಪಟ್ಟಿದ್ದರೆ, ಬಸವರಾಜ ಖೋತ ಮಿರಜ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಮೃತಪಟ್ಟಿದ್ದಾರೆ. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net