ಬೆಳಗಾವಿ: ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಮೃತಪಟ್ಟು, ಒಬ್ಬ ಗಾಯಗೊಂಡಿರುವ ಘಟನೆ ನಡೆದಿದೆ.
ಟಿಪ್ಪರ್ ಹಾಯ್ದು ಗೋಕಾಕ ತಾಲೂಕಿನ ಕೌಜಲಗಿ ಗ್ರಾಮದ ಉಮೇಶ ಕರೆಪ್ಪ ಭಜಂತ್ರಿ (29) ಮೃತಪಟ್ಟಿರುವ ಘಟನೆ ಇಟ್ನಾಳ-ಸತ್ತಿಗೇರಿ ರಸ್ತೆಯ ಮುಗಳಿಹಾಳ ಕ್ರಾಸ್‌ನಲ್ಲಿ ನಡೆದಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಮುರಗೋಡ ಠಾಣೆ ಪೊಲೀಸರು ತಿಳಿಸಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಟ್ರಾೃಕ್ಟರ್ ಟ್ರಾಲಿ ಬಡಿದು ಬೈಕ್ ಸವಾರ ಸವದತ್ತಿ ತಾಲೂಕಿನ ಶಾಂತಿ ನಗರ ನಿವಾಸಿ ಸಾದಿಕ್ ಅಕ್ಬರ್ ಕುಡಚಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸವದತ್ತಿ ತಾಲೂಕಿನ ಕರಿಕಟ್ಟಿ ಗ್ರಾಮದ ಬಳಿ ನಡೆದಿದೆ.
ಬೈಕ್ ಹಿಂಬದಿ ಕುಳಿತಿದ್ದ ಪ್ರೀತಂ ಪರಶುರಾಮ ಕುಂಕುಮಗಾರ ಗಾಯಗೊಂಡಿದ್ದಾರೆಂದು ಪ್ರಕರಣ ದಾಖಲಿಸಿಕೊಂಡಿರುವ ಸವದತ್ತಿ ಠಾಣೆಯ ಪೊಲೀಸರು ತಿಳಿಸಿದ್ದಾರೆ.