ವಿಜಯರತ್ನ ಪುರಸ್ಕೃತ ಸಂಗ್ರೇಶಿಗೆ ಸನ್ಮಾನ

ಬೆಂಗಳೂರಿನ ರಾಜ್ಯ ಚುನಾವಣಾ ಆಯುಕ್ತರ ಕಚೇರಿಯಲ್ಲಿ ವಿಜಯರತ್ನ ಪ್ರಶಸ್ತಿ ಪುರಸ್ಕೃತ ಜಿ.ಎಸ್.ಸಂಗ್ರೇಶಿ ಅವರನ್ನು ಸನ್ಮಾನಿಸಲಾಯಿತು. ಎಸ್.ಎಚ್.ಹೊಸಗೌಡ್ರ, ರಾಹುಲ ಸಂಗ್ರೇಶಿ, ವೈ.ಎ್.ಗಾಜಿ, ಮಾರುತಿ ಕುರಿ ಇತರರಿದ್ದರು.
ಬೆಂಗಳೂರಿನ ರಾಜ್ಯ ಚುನಾವಣಾ ಆಯುಕ್ತರ ಕಚೇರಿಯಲ್ಲಿ ವಿಜಯರತ್ನ ಪ್ರಶಸ್ತಿ ಪುರಸ್ಕೃತ ಜಿ.ಎಸ್.ಸಂಗ್ರೇಶಿ ಅವರನ್ನು ಸನ್ಮಾನಿಸಲಾಯಿತು. ಎಸ್.ಎಚ್.ಹೊಸಗೌಡ್ರ, ರಾಹುಲ ಸಂಗ್ರೇಶಿ, ವೈ.ಎ್.ಗಾಜಿ, ಮಾರುತಿ ಕುರಿ ಇತರರಿದ್ದರು.
Published on
ಸವದತ್ತಿ: ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ನೀಡುವ ಪ್ರತಿಷ್ಠಿತ ಇಂಟರ್‌ನ್ಯಾಷನಲ್ ವಿಜಯರತ್ನ ಪ್ರಶಸ್ತಿ ಪುರಸ್ಕೃತ ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್.ಸಂಗ್ರೇಶಿ ಅವರನ್ನು ಬೆಂಗಳೂರಿನ ರಾಜ್ಯ ಚುನಾವಣಾ ಆಯುಕ್ತರ ಕಚೇರಿಯಲ್ಲಿ ಸೋಮವಾರ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಜಿ.ಎಸ್.ಸಂಗ್ರೇಶಿ ಮಾತನಾಡಿ, ಈ ಗೌರವ ಸಮಾಜಮುಖಿ ಕಾರ್ಯಗಳಿಗೆ ಮತ್ತಷ್ಟು ಪ್ರೇರಣೆಯಾಗಿದೆ. ದುಬೈನಲ್ಲಿ ಕಾರ್ಯಕ್ರಮ ವೇಳೆ ಯುದ್ಧದ ಸಂಕಷ್ಟಕರ ಪರಿಸ್ಥಿತಿಯಲ್ಲೂ ವಿಜಯವಾಣಿ ಸಂಸ್ಥೆಯವರು ನೀಡಿದ ಸ್ಪಂದನೆ ಉತ್ತಮವಾಗಿತ್ತು. ವಿಶೇಷವಾಗಿ ವಿಜಯವಾಣಿ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಆನಂದ ಸಂಕೇಶ್ವರ ಅವರು ಎಲ್ಲರ ಸುರಕ್ಷತೆ ಬಗ್ಗೆ ಕಾಳಜಿ ವಹಿಸಿದರು. ಭಾರತಕ್ಕೆ ಸುರಕ್ಷಿತವಾಗಿ ಕರೆತರುವಲ್ಲಿ ಶ್ರಮಿಸಿದರು. ಇದಕ್ಕಾಗಿ ವಿಜಯವಾಣಿ ಬಳಗಕ್ಕೆ ಧನ್ಯವಾದ ಎಂದರು.
ಚುನಾವಣಾ ಆಯುಕ್ತರ ಕಚೇರಿ ಕಾನೂನು ಸಲಹೆಗಾರ ಎಸ್.ಎಚ್.ಹೊಸಗೌಡ್ರ, ರಾಹುಲ್ ಸಂಗ್ರೇಶಿ, ವಕೀಲ ವೈ.ಎ್.ಗಾಜಿ, ಮಾರುತಿ ಕುರಿ, ಬಸವರಾಜ ಆಯಟ್ಟಿ, ಜಿಪಂ ಮಾಜಿ ಸದಸ್ಯ ಸಿದ್ದಪ್ಪ ಗೊರವನಕೊಳ್ಳ, ಈಶ್ವರ ಮೇಟಿ, ಗದಿಗೆಪ್ಪ ನರಿ, ಮೌಲಾಸಾಬ್ ಶ್ಯಾಬಾರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net