ಸೋಯಾ ಅವರೆ ಮೌಲ್ಯವರ್ಧನೆ ತಂತ್ರಜ್ಞಾನ ರೈತರು ಅರಿಯಿರಿ

ಮತ್ತಿಕೊಪ್ಪದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬುಧವಾರ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮವನ್ನು ರೈತರೊಂದಿಗೆ ಸೇರಿ ಡಾ.ಡಿ.ಎಚ್.ಮಿತ್ರಣ್ಣವರ, ಡಾ.ಮಂಜುನಾಥ ಚೌರಡ್ಡಿ, ಎಸ್.ಎಂ.ವಾರದ, ಡಾ.ಬಸವರಾಜ ಕುಲಕರ್ಣಿ, ಡಾ.ಎಸ್.ಎಸ್.ಹಿರೇಮಠ ಇತರರು ಉದ್ಘಾಟಿಸಿದರು.
ಮತ್ತಿಕೊಪ್ಪದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬುಧವಾರ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮವನ್ನು ರೈತರೊಂದಿಗೆ ಸೇರಿ ಡಾ.ಡಿ.ಎಚ್.ಮಿತ್ರಣ್ಣವರ, ಡಾ.ಮಂಜುನಾಥ ಚೌರಡ್ಡಿ, ಎಸ್.ಎಂ.ವಾರದ, ಡಾ.ಬಸವರಾಜ ಕುಲಕರ್ಣಿ, ಡಾ.ಎಸ್.ಎಸ್.ಹಿರೇಮಠ ಇತರರು ಉದ್ಘಾಟಿಸಿದರು.
Published on
ಬೆಳಗಾವಿ: ರೈತರು ತಮ್ಮ ಸೋಯಾ ಅವರೆ ಹಾಗೂ ಅದರ ವಿವಿಧ ಉತ್ಪನ್ನಗಳಿಗೆ ಲಾಭದಾಯ ಬೆಲೆ ಪಡೆದುಕೊಳ್ಳಲು ಮಾರುಕಟ್ಟೆ, ಮೌಲ್ಯವರ್ಧನೆ ತಂತ್ರಜ್ಞಾನ ಮತ್ತು ವಿಧಾನಗಳನ್ನು ಅರಿತುಕೊಳ್ಳುವುದು ಮುಖ್ಯ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ವ್ಯವಹಾರ ನಿರ್ವಹಣಾ ವಿಭಾಗದ ಸಹಪ್ರಾಧ್ಯಾಪಕ ಡಾ.ಡಿ.ಎಚ್.ಮಿತ್ರಣ್ಣವರ ಹೇಳಿದರು.
ಮತ್ತಿಕೊಪ್ಪದ ಐಸಿಎಆರ್ ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ವಿವಿ ಕೃಷಿ ವ್ಯವಹಾರ ನಿರ್ವಹಣಾ ವಿಭಾಗದ ಡಾ.ಕೆ.ಎಚ್.ಪಾಟೀಲ ಅಧ್ಯಯನ ಪೀಠದಿಂದ ಬುಧವಾರ ಏರ್ಪಡಿಸಲಾಗಿದ್ದ ಸೋಯಾಬೀನ್ ಉತ್ಪಾದನೆ, ಮಾರುಕಟ್ಟೆ ಮತ್ತು ಮೌಲ್ಯವರ್ಧನೆ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸೋಯಾ ಅವರೆಯ ಮೌಲ್ಯವರ್ಧನೆ ಮತ್ತು ಉಪ ಉತ್ಪನ್ನಗಳಾದ ಟೊಫು, ಸೋಯಾ ಹಾಲು, ಚಂಕೆ ಮತ್ತು ಸೋಯಾ ಸಾಸ್‌ಗಳನ್ನು ಬಯೋಡೀಸೆಲ್, ಲೂಬ್ರಿಕಂಟ್‌ಗಳು, ಪ್ಲಾಸ್ಟಿಕ್‌ಗಳು ಮತ್ತು ಶಾಯಿಗಳಲ್ಲಿ ಕೈಗಾರಿಕಾ ಬಳಕೆಗಾಗಿ ಉತ್ಪಾದಿಸಬಹುದು. ಮೌಲ್ಯವರ್ಧನೆಯ ಸಮಯದಲ್ಲಿ ಸೋಯಾ ಎಣ್ಣೆ ಮತ್ತು ಸೋಯಾ ಮಿಲ್ ಪ್ರಮುಖ ಅಂಶಗಳಾಗಿವೆ. ಈ ವಿವಿಧ ಉತ್ಪನ್ನಗಳು ಆಹಾರ, ಕೈಗಾರಿಕಾ ಮತ್ತು ಕೃಷಿ ವಲಯಗಳಿಗೆ ಅನುಕೂಲ ಮಾಡಿಕೊಡುತ್ತವೆ, ಈ ಉತ್ಪನ್ನಗಳನ್ನು ಬೆಂಗಳೂರಿನ ಐಸಿಎಆರ್-ಎಟಿಎಆರ್ ಅಭಿವೃದ್ಧಿಪಡಿಸಿದ ಕಿಸಾನ್ ಸಮೃದ್ಧಿ ಆನ್‌ಲೈನ್ ಪೋರ್ಟಲ್ ಮೂಲಕವೂ ಮಾರಾಟ ಮಾಡಬಹುದು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕೆವಿಕೆ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ.ಮಂಜುನಾಥ ಚೌರಡ್ಡಿ ಸೋಯಾಬಿನ್ ಮೌಲ್ಯವರ್ಧನೆಯ ಮಹತ್ವ ಮತ್ತು ಅದರ ಮಾರುಕಟ್ಟೆ ಅಂಶಗಳ ಕುರಿತು ವಿವರಿಸಿದರು.
ಎಸ್.ಎಂ.ವಾರದ ಸ್ವಾಗತಿಸಿದರು. ಡಾ.ಬಸವರಾಜ ಕುಲಕರ್ಣಿ ವಂದಿಸಿದರು. ವಿಜ್ಞಾನಿ (ಸಸ್ಯಸಂರಕ್ಷಣೆ) ಡಾ.ಎಸ್.ಎಸ್.ಹಿರೇಮಠ ನಿರೂಪಿಸಿದರು.
---
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net