ನಾಡಿದ್ದಿಂದ ಸವದತ್ತಿಯಲ್ಲಿ ಪ್ರಶಿಕ್ಷಣ ಅಭ್ಯಾಸ ವರ್ಗ

ಸವದತ್ತಿ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ವಿರೂಪಾಕ್ಷ ಮಾಮನಿ ಮಾತನಾಡಿದರು. ಮಹಾದೇವ ಮುರಗೋಡ, ಸುಭಾಸ ಗೀದಿಗೌಡ್ರ, ಈರಣ್ಣ ವೀರಶೆಟ್ಟಿ ಇತರರಿದ್ದರು.
ಸವದತ್ತಿ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ವಿರೂಪಾಕ್ಷ ಮಾಮನಿ ಮಾತನಾಡಿದರು. ಮಹಾದೇವ ಮುರಗೋಡ, ಸುಭಾಸ ಗೀದಿಗೌಡ್ರ, ಈರಣ್ಣ ವೀರಶೆಟ್ಟಿ ಇತರರಿದ್ದರು.
Published on
ಸವದತ್ತಿ: ನಗರದಲ್ಲಿ ಮಾ.24ರಿಂದ 27ರ ವರೆಗೆ ಬಿಜೆಪಿ ಪದಾಧಿಕಾರಿಗಳಿಗಾಗಿ ಪ್ರಶಿಕ್ಷಣ ಅಭ್ಯಾಸ ವರ್ಗ ನಡೆಯಲಿದೆ. ತರಬೇತಿ ಶಿಬಿರದಲ್ಲಿ ಸುಮಾರು 600 ಜನರು ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ತಾಲೂಕಾಧ್ಯಕ್ಷ ವಿರೂಪಾಕ್ಷ ಮಾಮನಿ ತಿಳಿಸಿದರು.
ನಗರದ ಎಪಿಎಂಸಿಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಈ ಅಭ್ಯಾಸ ವರ್ಗ ಕಾರ್ಯಕರ್ತರ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾಗಿದೆ. ಪಕ್ಷದ ಮೇಲಿನ ಬದ್ಧತೆ ಮತ್ತು ವೈಚಾರಿಕತೆ ಬೆಳೆಸುವ ಪ್ರಮುಖ ವೇದಿಕೆಯಾಗಿದೆ. ವಸತಿ ಸಹಿತ ನಡೆಯುವ ತರಬೇತಿಯಲ್ಲಿ ಎಲ್ಲ ಪದಾಧಿಕಾರಿಗಳು ಭಾಗವಹಿಸುವುದು ಕಡ್ಡಾಯವಾಗಿದೆ ಎಂದು ತಿಳಿಸಿದರು.
ಮಂಡಲ ಪ್ರಧಾನ ಕಾರ್ಯದರ್ಶಿ ಮಹಾದೇವ ಮುರಗೋಡ ಮಾತನಾಡಿ, ಮೊದಲ ಹಂತ ಮಾ.24ರಂದು ಸಂಜೆ 4ರಿಂದ ಮಾ.25ರ ಸಂಜೆ 4ರವರೆಗೆ ಬೂತ್ ಸಂಖ್ಯೆ 1ರಿಂದ 80ರ ವರೆಗೆ ನಡೆಯಲಿದೆ. ದ್ವಿತೀಯ ಹಂತ ಮಾ.25ರಿಂದ 26ರವರೆಗೆ ಬೂತ್ ಸಂಖ್ಯೆ 81ರಿಂದ 160ರ ವರೆಗೆ ಹಾಗೂ ತೃತೀಯ ಹಂತ ಮಾ.26ರಿಂದ 27ರ ವರೆಗೆ ಬೂತ್ ಸಂಖ್ಯೆ 161ರಿಂದ 233ರ ವರೆಗೆ ಆಯೋಜಿಸಲಾಗಿದೆ ಎಂದರು.
ಮಂಡಲ ಪ್ರಧಾನ ಕಾರ್ಯದರ್ಶಿ ಸುಭಾಸ ಗೀದಿಗೌಡ್ರ ಮಾತನಾಡಿ, ಪಕ್ಷದ ಇತಿಹಾಸ ಹಾಗೂ ಕಾರ್ಯವೈಖರಿ ಪರಿಚಯಿಸುವುದು ಮುಖ್ಯ ಧ್ಯೇಯವಾಗಿದೆ ಎಂದರು. ಈರಣ್ಣ ವೀರಶೆಟ್ಟಿ, ಮಹಾಂತೇಶ ಯಕ್ಕೇರಿ, ಬಸವರಾಜ ಶಿಗ್ಗಾಂವಿ, ಸಂಜು ಬಡಕರಿ, ಬಸವರಾಜ ಹನಸಿ, ಸಂತೋಷ ಹೊಂಗಲ, ಉಮೇಶ ಶಿಂದೋಗಿ, ಶಿವಕುಮಾರ ಶಿಂತ್ರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net