ಬೆಳಗಾವಿ: ಖಂಜರಗಲ್ಲಿಯಲ್ಲಿ ಮಟ್ಕಾ ಆಡುತ್ತಿದ್ದಾಗ ದಾಳಿ ಮಾಡಿರುವ ಮಾರ್ಕೆಟ್ ಠಾಣೆ ಪೊಲೀಸರು ಸಾವಗಾಂವದ ಅಶೋಕ ಪವಾರ, ಹನುಮಾನ ನಗರದ ಗಜಾನನ ಪಾಟೀಲ ಮತ್ತು ಭಾತಖಾಂಡೆಗಲ್ಲಿಯ ಪವನ ಭಾತಖಾಂಡೆಯನ್ನು ವಶಕ್ಕೆ ಪಡೆದು ಒಟ್ಟು 11,180 ರೂ. ಜಪ್ತಿ ಮಾಡಿದ್ದಾರೆ.
ಇವರಿಂದ ಹಣ ಪಡೆಯುತ್ತಿದ್ದ ಪಾಹೀಮ್ ಕೊತ್ವಾಲ್ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಪಾದಚಾರಿ ಸಾವು: ಯರಗಟ್ಟಿ ತಾಲೂಕಿನ ಬೂದಿಗೊಪ್ಪ ಬಳಿಯ ಬೆಳಗಾವಿ-ಬಾಗಲಕೋಟೆ ರಸ್ತೆಯಲ್ಲಿ ವಾಹನ ಡಿಕ್ಕಿಯಾಗಿ ಪಾದಚಾರಿ ಬಸಪ್ಪ ಮಾದರ (45) ಮೃತಪಟ್ಟಿದ್ದಾರೆ. ಈ ಕುರಿತು ಮುರಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.