

ಪ್ರಮುಖ ಮುಖ್ಯಾಂಶಗಳು
ಬೈಕ್ ಕಳ್ಳನ ಬಂಧನ
ಬೆಳಗಾವಿ: ಬೈಕ್ ಕಳ್ಳತನದ ಆರೋಪಿಯನ್ನು ನಗರ ಪೊಲೀಸರು ಶನಿವಾರ ಬಂದಿಸಿದ್ದಾರೆ. ಆತನಿಂದ 4.90 ಲಕ್ಷ ರೂ. ಮೌಲ್ಯದ ೬ ಬೈಕ್‌ಗಳನ್ನು ವಶಪಡಿಸಲಾಗಿದೆ.
ತಾಲೂಕಿನ ಪೀರನವಾಡಿ ಗ್ರಾಮದ ನಿವಾಸಿ ಮಲಿಕಜಾನ್ ಉರ್ಫ ಬಾಬಾಫಾರುಕ್ ಬುಡಣ್ಣವರ(೨೦) ಬಂಡೀತ ಆರೋಪಿ. ಪೀರನವಾಡಿ ಗ್ರಾಮದಲ್ಲಿ ಕಳೆದ ಒಂದು ವಾರದ ಹಿಂದೆ ತನ್ವಿರಅಹ್ಮದ್ ಮುಜಾವರ ಎಂಬುವವರ ಬೈಕ್ ಕಳ್ಳತನದ ಕುರಿತು ಗ್ರಾಮೀಣ ಪೊಲೀಸ್ ಠಾಣೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಕುರಿತು ತನಿಖೆ ನಡೆಸಿರುವ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಬೈಕ್ ಕಳ್ಳತನದ ಕುರಿತು ಒಪ್ಪಿಕೊಂಡಿದ್ದಾನೆ.
ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.