ಇಷ್ಟಲಿಂಗ ಪೂಜೆಯಲ್ಲಿದೆ ನೆಮ್ಮದಿ

ತುಬಚಿ ಗ್ರಾಮದ ಶಿವಲಿಂಗೇಶ್ವರ ಸಂಸ್ಥಾನ ಮಠದಲ್ಲಿ ಭಕ್ತರು ಇಷ್ಟಲಿಂಗ ಪೂಜೆಯಲ್ಲಿ ತೊಡಗಿರುವುದು.
ತುಬಚಿ ಗ್ರಾಮದ ಶಿವಲಿಂಗೇಶ್ವರ ಸಂಸ್ಥಾನ ಮಠದಲ್ಲಿ ಭಕ್ತರು ಇಷ್ಟಲಿಂಗ ಪೂಜೆಯಲ್ಲಿ ತೊಡಗಿರುವುದು.
Published on
ಅಥಣಿ: ಇಷ್ಟಲಿಂಗ ಪೂಜೆಯಿಂದ ಸುಖ, ಶಾಂತಿ, ನೆಮ್ಮದಿ ಪ್ರಾಪ್ತಿಯಾಗುತ್ತದೆ. ಮಕ್ಕಳಲ್ಲಿ ಸಂಸ್ಕೃತಿ, ಉತ್ತಮ ವಿಚಾರ ಬಿತ್ತಬೇಕು ಎಂದು ನಾಗನೂರು ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಹೇಳಿದರು.
ತಾಲೂಕಿನ ತುಬಚಿ ಗ್ರಾಮದ ಶಿವಲಿಂಗೇಶ್ವರ ಸಂಸ್ಥಾನಮಠದ ಶಿವಶರಣರ ಶಿಲಾಮಂಟಪ ಹಾಗೂ ಗುರುಭವನದ ಲೋಕಾರ್ಪಣೆ ಕಾರ್ಯಕ್ರಮ ನಿಮಿತ್ತ ಈಚೆಗೆ ಹಮ್ಮಿಕೊಂಡಿದ್ದ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮದಲ್ಲಿ ಮಾತನಾಡಿ, ಉತ್ತಮ ವಿಚಾರ ಉನ್ನತ ಸಾಧನೆಗೆ ಪ್ರೇರಣೆಯಾಗುತ್ತದೆ. ಅಂಗದ ಮೇಲೆ ಲಿಂಗ ಇಲ್ಲದವರಿಗಾಗಿ ಇಷ್ಟಲಿಂಗ, ರುದ್ರಾಕ್ಷಿ ಧಾರಣೆ ಹಮ್ಮಿಕೊಂಡಿದ್ದೇವೆ. ಇದು ಲಿಂಗಾಯತ ಧರ್ಮದ ಮೌಲ್ಯವಾಗಿದೆ ಎಂದರು. ಶೇಗುಣಿಸಿಯ ಡಾ.ಮಹಾಂತಪ್ರಭು ಸ್ವಾಮೀಜಿ ಮಾತನಾಡಿ, ನಿತ್ಯ ಇಷ್ಟಲಿಂಗ ಪೂಜೆ ಮಾಡುವುದರಿಂದ ಕೆಟ್ಟ ವಿಚಾರಗಳು ದೂರವಾಗಿ ಸಂತೋಷ ಪ್ರಾಪ್ತಿಯಾಗುತ್ತದೆ. ಲಿಂಗಪೂಜಾ ನಿಷ್ಟರರಾಗಿ ಕಾಯಕದಲ್ಲಿ ತೊಡಗಿಕೊಳ್ಳಬೇಕು. ಬಸವಣ್ಣನವರ ವಚನ ಸಂದೇಶಗಳು ನಮ್ಮ ಬದುಕಿಗೆ ಬೆಳಕಾಗಿವೆ ಎಂದರು. ನೂರಾರು ಭಕ್ತರಿಗೆ ಇಷ್ಟಲಿಂಗ
ಧಾರಣೆ ಮಾಡಿ ಇಷ್ಟಲಿಂಗದ ಪೂಜೆ ಕುರಿತು ಪ್ರಾತ್ಯಕ್ಷಿಕೆ ತಿಳಿಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net