ಜಾನಪದ ಉಳಿಸುವ ಕಾರ್ಯ ಪ್ರಶಂಸಾರ್ಹ

 ಯಮಕನಮರಡಿಯ ಎನ್‌ಎಸ್‌ಎಫ್ ಶಾಲೆಯಲ್ಲಿ ಆಯೋಜಿಸಿದ್ದ ಸತೀಶ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಕಾಂಕ್ಷಾ ರೊಟ್ಟಯ್ಯನವರ ಉದ್ಘಾಟಿಸಿದರು. ಗುರುಸಿದ್ಧೇಶ್ವರ ಸ್ವಾಮೀಜಿ, ಸಿದ್ಧಬಸವ ದೇವರು, ಡಾ.ಆನಂದ ಮಹಾರಾಜ ಗೊಸಾವಿ, ರಿಯಾಜ್ ಚೌಗಲಾ, ಕಿರಣಸಿಂಗ್ ರಜಪೂತ, ರವಿಂದ್ರ ಜಿಂಡ್ರಾಳಿ ಇತರರಿದ್ದರು.
ಯಮಕನಮರಡಿಯ ಎನ್‌ಎಸ್‌ಎಫ್ ಶಾಲೆಯಲ್ಲಿ ಆಯೋಜಿಸಿದ್ದ ಸತೀಶ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಕಾಂಕ್ಷಾ ರೊಟ್ಟಯ್ಯನವರ ಉದ್ಘಾಟಿಸಿದರು. ಗುರುಸಿದ್ಧೇಶ್ವರ ಸ್ವಾಮೀಜಿ, ಸಿದ್ಧಬಸವ ದೇವರು, ಡಾ.ಆನಂದ ಮಹಾರಾಜ ಗೊಸಾವಿ, ರಿಯಾಜ್ ಚೌಗಲಾ, ಕಿರಣಸಿಂಗ್ ರಜಪೂತ, ರವಿಂದ್ರ ಜಿಂಡ್ರಾಳಿ ಇತರರಿದ್ದರು.
Published on
ಉಳ್ಳಾಗಡ್ಡಿ-ಖಾನಾಪೂರ: ಮೊಬೈಲ್ ಹಾವಳಿಯಲ್ಲಿ ಜಾನಪದ ಕಲೆ ಹಾಗೂ ಸಂಸ್ಕೃತಿ ನಶಿಸಿಹೊಗುತ್ತಿರುವ ದಿನಗಳಲ್ಲಿ ಸಚಿವ ಸತೀಶ ಜಾರಕಿಹೊಳಿಯವರು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸೂಕ್ತ ವೇದಿಕೆ ಕಲ್ಪಿಸಿ ಜಾನಪದ ಕಲೆಗಳನ್ನು ಉಳಿಸಿ, ಬೆಳೆಸುತ್ತಿರುವುದು ಕಾರ್ಯ ಪ್ರಶಂಸಾರ್ಹವಾದದು ಎಂದು ಹತ್ತರಗಿಯ ಕಾರಿಮಠದ ಗುರುಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ಯಮಕನಮರಡಿಯ ಎನ್‌ಎಸ್‌ಎಫ್ ಶಾಲಾ ಆವರಣದಲ್ಲಿ ಶನಿವಾರ ಸತೀಶ ಜಾರಕಿಹೋಳಿ ಫೌಂಡೇಷನ್ ಆಶ್ರಯದಲ್ಲಿ ಆಯೋಜಿಸಿದ್ದ ಸತೀಶ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ವಿದ್ಯಾರ್ಥಿಗಳ ಕಲೆಗೆ ಈ ವೇದಿಕೆಯಲ್ಲಿ ಬೆಲೆ ದೊರೆಯುತ್ತಿರುವುದು ಸಂತಸ ತಂದಿದೆ ಎಂದರು.
ಯಮಕನಮರಡಿ ಹುಣಸಿಕೊಳ್ಳಮಠದ ಸಿದ್ಧಬಸವ ದೇವರು ಮಾತನಾಡಿ, ಸಂಸ್ಕಾರದ ಗರಡಿ ಯಮಕನಮರಡಿಯಲ್ಲಿ ಇಂಥ ಸಾಂಸ್ಕೃತಿ ಭವ್ಯ ವೇದಿಕೆ ಕಲ್ಪಿಸಿರುವುದು ಶ್ಲಾಘನೀಯ. ಗಡಿಯಲ್ಲಿ ಬುದ್ಧ-ಬಸವ ಅಂಬೇಡ್ಕರ್ ಧ್ಯೇಯೋದ್ದೇಶಗಳನ್ನು ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿರುವ ಸತೀಶ ಜಾರಕಿಹೊಳಿ ಗ್ರಾಮೀಣ ವಲಯದ ವಿದ್ಯಾರ್ಥಿಗಳ ಭವ್ಯ ಭವಿಷ್ಯಕ್ಕೆ ಮುನ್ನುಡಿಯಾಗಿದ್ದಾರೆ ಎಂದರು.
ಹತ್ತರಗಿ ಹರಿಮಂದಿರದ ಡಾ.ಆನಂದ ಮಹಾರಾಜ ಗೊಸಾವಿ ಮಾತನಾಡಿ, ಸತೀಶ ಜಾರಕಿಹೊಳಿ ತಾವೊಬ್ಬರೇ ಬೆಳೆಯದೇ ಸಮಾಜದಲ್ಲಿನ ಎಲ್ಲರನ್ನೂ ತಮ್ಮೊಟ್ಟಿಗೆ ಬೆಳೆಸುವ ಮಹದಾಸೆ ಉಳ್ಳವರಾಗಿದ್ದಾರೆ ಎಂದರು.
ಕಳೆದ ಬಾರಿ ಸತೀಶ ಪ್ರತಿಭಾ ಪುರಸ್ಕಾರ ಭಾಷಣ ಸ್ಪರ್ಧೆ ವಿಜೇತ ವಿದ್ಯಾರ್ಥಿನಿ ಆಕಾಂಕ್ಷಾ ರೊಟ್ಟಯ್ಯನವರ ಕಾರ್ಯಕ್ರಮ ಉದ್ಘಾಟಿಸಿದರು.
ಸತೀಶ ಫೌಂಡೇಷನ್ ಕಾರ್ಯದರ್ಶಿ ರಿಯಾಜ್ ಚೌಗಲಾ, ಕಿರಣಸಿಂಗ್ ರಜಪೂತ, ರವಿಂದ್ರ ಜಿಂಡ್ರಾಳಿ, ಈರಣ್ಣಾ ಬಿಸಿರೊಟ್ಟಿ, ದಸ್ತಗೀರ್ ಬಸ್ಸಾಪೂರಿ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾವತಿ ಪಾಟೀಲ, ಗ್ರಾಪಂ ಅಧ್ಯಕ್ಷೆ ಆಸ್ಮಾ ಫಣಿಬಂಧ, ಹತ್ತರಗಿ ಗ್ರಾಪಂ ಅಧ್ಯಕ್ಷ ಸಮೀರ್ ಬೇಪಾರಿ, ಎಸ್.ಎ. ಅತ್ಯಾಳಿ, ಹತ್ತರಗಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಅನಂದ ಹೊಳೆನ್ನವರ ಇತರರು ಉಪಸ್ಥಿತರಿದ್ದರು,
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net