ಧರ್ಮಸ್ಥಳ ಸಂಘದ ಕಾರ್ಯ ಶ್ಲಾಘನೀಯ

ಎಲಿಮುನ್ನೋಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭೆಯನ್ನು ಗಣ್ಯರು ಉದ್ಘಾಟಿಸಿದರು. ಪೃಥ್ವಿ ಕತ್ತಿ,  ಕೆಂಪಣ್ಣ ವಾಸೇದಾರ, ಬಿ.ಕೆ.ಮಗೆನ್ನವರ, ಜಿನಗೌಡ ಇಮಗೌಡನವರ ಇತರರಿದ್ದರು.
ಎಲಿಮುನ್ನೋಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭೆಯನ್ನು ಗಣ್ಯರು ಉದ್ಘಾಟಿಸಿದರು. ಪೃಥ್ವಿ ಕತ್ತಿ, ಕೆಂಪಣ್ಣ ವಾಸೇದಾರ, ಬಿ.ಕೆ.ಮಗೆನ್ನವರ, ಜಿನಗೌಡ ಇಮಗೌಡನವರ ಇತರರಿದ್ದರು.
Published on
ಹುಕ್ಕೇರಿ: ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರನ್ನು ಆರ್ಥಿಕ ಸಬಲ ಮಾಡುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯ ಶ್ಲಾಘನೀಯ ಎಂದು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ನಿರ್ದೇಶಕ ಪೃಥ್ವಿ ಕತ್ತಿ ಹೇಳಿದರು.
ತಾಲೂಕಿನ ಎಲಿಮುನ್ನೋಳಿ ಗ್ರಾಮದ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಹಾಯ ಮಾಡುತ್ತಿರುವುದು ಹೆಮ್ಮೆ ಎಂದರು.
ಗ್ರಾಪಂ ಅಧ್ಯಕ್ಷ ಮೀರಾಸಾಬ್ ಮುಲ್ತಾನಿ, ತಾಲೂಕು ಕೃಷಿಕ ಸಮುದಾಯದ ಅಧ್ಯಕ್ಷ ಬಿ.ಕೆ.ಮಗೆನ್ನವರ ಮಾತನಾಡಿ, ಧರ್ಮಸ್ಥಳ ಸಂಸ್ಥೆ ಕಾರ್ಯ ಎಲ್ಲರಿಗೂ ಮಾದರಿ ಎಂದರು.
ಸಾನ್ನಿಧ್ಯ ವಹಿಸಿದ್ದ ಅವಜೀಕರ ಆಶ್ರಮದ ಅಭಿನವ ಮಂಜುನಾಥ ಸ್ವಾಮೀಜಿ, ಯೋಜನೆ ಜಿಲ್ಲಾ ನಿರ್ದೇಶಕ ವಿಠ್ಠಲ ಸಾಲ್ಯಾನ್, ನಿವೃತ್ತ ಪ್ರಾಧ್ಯಾಪಕ ಪಿ.ಜಿ.ಕೊಣ್ಣೂರ ಮಾತನಾಡಿದರು.
ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ನಿರ್ದೇಶಕ ಕೆಂಪಣ್ಣ ವಾಸೇದಾರ, ಮುಖಂಡರಾದ ನಿಂಗಪ್ಪ ಹಸರಾಣಿ, ಶಿವಕುಮಾರ ಮರೆನ್ನವರ, ಜಿನಗೌಡ ಇಮಗೌಡನವರ, ಕಲಗೌಡ ಮಲಗೌಡನವರ, ಭೀಮಗೌಡ ಗಿರಿಗೌಡನವರ, ಗೌರೀಶ ಹಂದಿಗೂಡಮಠ, ಅಪ್ಪಾಸಾಹೇಬ ಇಮಗೌಡನವರ, ಬಸಪ್ಪ ಉರುಬಿನಟ್ಟಿ, ಮಾರುತಿ ರಾಚನ್ನವರ, ಪಾಂಡು ಜಾಧವ, ರಾಮಪ್ಪ ವಾಸೇದಾರ, ಯೋಜನಾಧಿಕಾರಿ ವಿನಾಯಕ ಇತರರಿದ್ದರು.
ಯೋಜನಾಧಿಕಾರಿ ವಿನಾಯಕ ಕಾಕಂಬಿ ಸ್ವಾಗತಿಸಿದರು. ಸಂತೋಷ ನಿರೂಪಿಸಿದರು. ವಲಯ ಮೇಲ್ವಿಚಾರಕ ಭಾಸ್ಕರ ಪೂಜೇರಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net