ಮಲ್ಲಿಕಾರ್ಜುನ ಸ್ಪರ್ಶದಲ್ಲಿದೆ ಪುಣ್ಯ

ತೇರದಾಳದ ಅಲ್ಲಮಪ್ರಭುದೇವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಯುಗಾದಿ ಉತ್ಸವದ ಪೂರ್ವಭಾವಿ ಸಭೆಗೆ ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು ಚಾಲನೆ ನೀಡಿದರು. ಸಿದ್ದು ಸವದಿ, ಡಾ.ಪಿ.ನಾಗರಾಜ ಇತರರಿದ್ದರು.
ತೇರದಾಳದ ಅಲ್ಲಮಪ್ರಭುದೇವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಯುಗಾದಿ ಉತ್ಸವದ ಪೂರ್ವಭಾವಿ ಸಭೆಗೆ ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು ಚಾಲನೆ ನೀಡಿದರು. ಸಿದ್ದು ಸವದಿ, ಡಾ.ಪಿ.ನಾಗರಾಜ ಇತರರಿದ್ದರು.
Published on
ಮಾಂಜರಿ: ಶ್ರೀಶೈಲ ಮಲ್ಲಿಕಾರ್ಜುನ ದೇವರನ್ನು ಶುದ್ಧ ಮನಸ್ಸಿನಿಂದ ಪೂಜಿಸಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು ಹೇಳಿದರು.
ತೇರದಾಳ ಪಟ್ಟಣದ ಅಲ್ಲಮಪ್ರಭು ದೇವರ ದೇವಸ್ಥಾನದಲ್ಲಿ ಶ್ರೀಶೈಲದಲ್ಲಿ `ಯುಗಾದಿ ಉತ್ಸವ' ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಯುಗಾದಿ ಉತ್ಸವದಲ್ಲಿ ಮಲ್ಲಿಕಾರ್ಜುನ ಹಾಗೂ ಭ್ರಮರಾಂಬಾ ದೇವರ ದರ್ಶನವನ್ನು ಮೊದಲು ಕರ್ನಾಟಕ ಭಕ್ತರಿಗೆ ನೀಡುವ ಸಂಪ್ರದಾವಿದೆ. ಅಲ್ಲಮಪ್ರಭು ಸಾಧನೆ ಮಾಡಿ ಬಯಲಲ್ಲಿ ಬಯಲಾಗಿದ್ದು ಶ್ರೀಶೈಲದಲ್ಲಿ. ಭಕ್ತರು ಹಾಗೂ ದೇವಸ್ಥಾನ ಕಮಿಟಿ ನಡುವೆ ಸಮನ್ವಯ ಅಗತ್ಯ. ಭಾಷೆ ಸಮಸ್ಯೆ ಇದ್ದರೂ ಹೊಂದಾಣಿಕೆ, ಸಹನೆ, ತಾಳ್ಮೆ ಇರಬೇಕು ಎಂದರು.
ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದ ಮುಖ್ಯ ಅರ್ಚಕ ಡಾ.ಪಿ.ನಾಗರಾಜ ಶಾಸ್ತ್ರೀ, ಶ್ರೀಶೈಲಪ್ರಭೆ ಪತ್ರಿಕೆ ಸಹ ಸಂಪಾದಕ ಸತ್ಯಬ್ರಹ್ಮಾಚಾರ್ಯ, ಹಿರೇಮಠದ ಗಂಗಾಧರ ದೇವರು ಮಾತನಾಡಿದರು. ಶ್ರೀಶೈಲ ದೇವಸ್ಥಾನದ ಸಹಾಯಕ ಕಾರ್ಯನಿರ್ವಾಹಕ ಎಂ.ಹರಿದಾಸ, ಅರ್ಚಕ ಬಸಯ್ಯ ಬಾವಿ, ಪ್ರಭುಲಿಂಗೇಶ್ವರ ಅನ್ನಪ್ರಸಾದ ಸಮಿತಿ ಅಧ್ಯಕ್ಷ ಬಸವರಾಜ ಕರಲಟ್ಟಿ ಇತರರಿದ್ದರು.
ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನ ಕಮಿಟಿ ಅಧ್ಯಕ್ಷ ರಮೇಶ ನಾಯ್ಡು ಮಾತನಾಡಿ, ಯುಗಾದಿ ಉತ್ಸವ ನಿಮಿತ್ತ ಮಾ.೬ರಿಂದ ೧೫ರವರೆಗೆ ಸ್ಪರ್ಶದರ್ಶನ ವ್ಯವಸ್ಥೆ ಇರುತ್ತದೆ. ಪ್ರತಿದಿನ ನಾಲ್ಕು ಅವಽಯಲ್ಲಿ ದರ್ಶನ ನಡೆಯಲಿದೆ. ಮಾ.೧೬ರಿಂದ ೨೦ರ ವರೆಗೆ ಆಲಂಕಾರಿಕ ದರ್ಶನ ಮಾತ್ರ ಇರುತ್ತದೆ. ದಾಸೋಹ ಮಾಡುವವರಿಗೆ ದೇವಸ್ಥಾನ ಕಮಿಟಿ ವತಿಯಿಂದ ಸೌಕರ್ಯ ಒದಗಿಸಲಾಗುವುದು. ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.
"

ಶ್ರೀಶೈಲದಲ್ಲಿ ಯಾತ್ರಿನಿವಾಸ ನಿರ್ಮಿಸಲು ಬಸವರಾಜ ಬೊಮ್ಮಾಯಿ ಸರ್ಕಾರ ೮೦ ಕೋಟಿ ರೂ. ಅನುದಾನ ನೀಡಿದೆ. ಅಲ್ಲಿನ ಸರ್ಕಾರ ಸೂಕ್ತ ಜಾಗ ಒದಗಿಸಲು ವಿಳಂಬ ಮಾಡುತ್ತಿದೆ. ಈ ಬಗ್ಗೆ ಒತ್ತಡ ಹೇರಿ ಯಾತ್ರಿನಿವಾಸ ನಿರ್ಮಿಸಲು ಕ್ರಮ ಕೈಗೊಳ್ಳಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net