ಅಪ್ರತಿಮ ಸಾಧಕ ಡಾ.ಪ್ರಭಾಕರ ಕೋರೆ

ಬೆಳಗಾವಿ ಕೆಎಲ್‌ಇ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಪದ್ಮಶ್ರೀ ಪುರಸ್ಕೃತ ಡಾ.ಪ್ರಭಾಕರ ಕೋರೆ ಅವರಿಗೆ ಕೆಎಲ್‌ಇ ಸಂಸ್ಥೆ ನೂತನ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು. ಮಹಾಂತೇಶ ಕೌಜಲಗಿ, ಮಹಾಂತೇಶ ಕವಟಗಿಮಠ, ಬಸವರಾಜ ತಟವಟಿ, ಶಂಕರಣ್ಣ ಮುನವಳ್ಳಿ, ಎಸ್.ಸಿ.ಮೆಟಗುಡ್ಡ, ಜಯಾನಂದ ಮುನವಳ್ಳಿ, ಡಾ.ವಿ.ಐ.ಪಾಟೀಲ, ಅಮಿತ ಕೋರೆ, ಡಾ.ಪ್ರೀತಿ ದೊಡವಾಡ ಇತರರಿದ್ದರು.
ಬೆಳಗಾವಿ ಕೆಎಲ್‌ಇ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಪದ್ಮಶ್ರೀ ಪುರಸ್ಕೃತ ಡಾ.ಪ್ರಭಾಕರ ಕೋರೆ ಅವರಿಗೆ ಕೆಎಲ್‌ಇ ಸಂಸ್ಥೆ ನೂತನ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು. ಮಹಾಂತೇಶ ಕೌಜಲಗಿ, ಮಹಾಂತೇಶ ಕವಟಗಿಮಠ, ಬಸವರಾಜ ತಟವಟಿ, ಶಂಕರಣ್ಣ ಮುನವಳ್ಳಿ, ಎಸ್.ಸಿ.ಮೆಟಗುಡ್ಡ, ಜಯಾನಂದ ಮುನವಳ್ಳಿ, ಡಾ.ವಿ.ಐ.ಪಾಟೀಲ, ಅಮಿತ ಕೋರೆ, ಡಾ.ಪ್ರೀತಿ ದೊಡವಾಡ ಇತರರಿದ್ದರು.
Published on
ಬೆಳಗಾವಿ: ಕೆಎಲ್‌ಇ ಸಂಸ್ಥೆ ಸ್ಥಾಪನೆ ಮೂಲಕ ಸಪ್ತಋಷಿಗಳು ಕಂಡ ಕನಸನ್ನು ನನಸು ಮಾಡಿದ್ದು ಮಾತ್ರವಲ್ಲದೆ, ಸಂಸ್ಥೆಯನ್ನು ಜಗದಗಲಕ್ಕೆ ವಿಸ್ತರಿಸಿದ ಖ್ಯಾತಿ ಪದ್ಮಶ್ರೀ ಡಾ.ಪ್ರಭಾಕರ ಕೋರೆ ಅವರಿಗೆ ಸಲ್ಲುತ್ತದೆ ಎಂದು ವಿಧಾನ ಪರಿಷತ್ ಮಾಜಿ ಮುಖ್ಯಸಚೇತಕ ಹಾಗೂ ಕೆಎಲ್‌ಇ ನಿರ್ದೇಶಕ ಮಹಾಂತೇಶ ಕವಟಗಿಮಠ ಅಭಿಮಾನ ವ್ಯಕ್ತಪಡಿಸಿದರು.
ಇಲ್ಲಿನ ಕೆಎಲ್‌ಇ ಸಂಸ್ಥೆ ಪ್ರಧಾನ ಕಚೇರಿಯಲ್ಲಿ ಸಂಸ್ಥೆಯ ನೂತನ ಆಡಳಿತ ಮಂಡಳಿ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಡಾ.ಪ್ರಭಾಕರ ಕೋರೆ ಅವರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಸಾಮಾಜಿಕ ಬದಲಾವಣೆಗಾಗಿ ಸ್ಥಾಪಿತ ಕೆಎಲ್‌ಇ ಸಂಸ್ಥೆಯ ಕರಣಧಾರತ್ವವನ್ನು ವಹಿಸಿ 42ವರ್ಷಗಳ ಸುದಿರ್ಘ ಅವಧಿಗೆ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಡಾ.ಪ್ರಭಾಕರ ಕೋರೆ ಅವರದ್ದು ಮಾದರಿ ವ್ಯಕ್ತಿತ್ವ. ಸಂಸ್ಥೆಯ ಶಾಖೆಗಳನ್ನು 300 ಗಡಿ ದಾಟಿಸಿ 1.25 ಲಕ್ಷ ವಿದ್ಯಾರ್ಥಿಗಳಿಗೆ ಶಿಕ್ಷಣ ದಾಸೋಹ ನೀಡಲು ಕಾರಣರಾಗಿದ್ದಾರೆ. ಡಾ.ಕೋರೆ ಅವರು, ಶಿಕ್ಷಣ, ಆರೋಗ್ಯ, ಕೃಷಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸಂಖ್ಯಾತ್ಮಕ ಪ್ರಗತಿ ಮಾತ್ರವಲ್ಲದೆ, ಗುಣಾತ್ಮಕತೆಗೆ ಒತ್ತು ನೀಡಿದವರು. ತಮ್ಮ ಸೇವಾವಧಿಯಲ್ಲಿ ನನ್ನಂತಹ ಅನೇಕ ಯುವ ನಾಯಕರನ್ನು ಬೆಳೆಸಿ ಸಮಾಜದ ಮುನ್ನೆಲೆಗೆ ತಂದ ಅಭಿಮಾನ ನಮ್ಮೆಲ್ಲರಲ್ಲಿದೆ. ಅಷ್ಟಮಋಷಿಯಾಗಿ ಕೆಎಲ್‌ಇ ಸಂಸ್ಥೆ ಮೂಲಕ ಸಲ್ಲಿಸಿದ ಸೇವೆ ಪರಿಗಣಿಸಿದ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿರುವುದು ಸಮಸ್ತ ಕೆಎಲ್‌ಇ ಸಂಸ್ಥೆಗೆ ಸಂದ ಗೌರವವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕೆಎಲ್‌ಇ ಅಧ್ಯಕ್ಷ, ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಹಿಡಿದ ಕೆಲಸವನ್ನು ಅಚ್ಚುಕಟ್ಟಾಗಿ ಪೂರ್ಣಗೊಳಿಸಿ ಸಮಾಜಕ್ಕೆ ಧಾರೆ ಎರೆಯುವ ಡಾ.ಪ್ರಭಾಕರ ಕೋರೆ ಅವರ ಸೇವಾ ಮನೋಭಾವ ಯುವಜನಾಂಗಕ್ಕೆ ಮಾದರಿ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿರುವ ತಂತ್ರಜ್ಞಾನ ಗ್ರಾಮೀಣ ಜನತೆಗೂ ಸಿಗಬೇಕು ಎನ್ನುವ ಅವರ ಕಳಕಳಿ ನಮ್ಮೆಲ್ಲರಿಗೂ ಮಾರ್ಗದರ್ಶಿ. ಅಂತಹ ವ್ಯಕ್ತಿತ್ವದ ಡಾ.ಪ್ರಭಾಕರ ಕೋರೆ ಅವರು ಅತ್ಯುನ್ನತ ಗೌರವಕ್ಕೆ ಭಾಜನರಾಗಿರುವುದು ಸಮಸ್ತ ಕನ್ನಡಿಗರ ಹೆಮ್ಮೆ ಎಂದರು. ಡಾ.ಪ್ರಭಾಕರ ಕೋರೆ ಅವರಿಗೆ ದೊರೆತ ಪ್ರಶಸ್ತಿ ಕೆಎಲ್‌ಇ ಸಂಸ್ಥೆಯನ್ನು ಇನ್ನಷ್ಟು ಪ್ರಕಾಶಿಸುವಂತೆ ಮಾಡಿದೆ ಎಂದು ಸರ್ವಸದಸ್ಯರು ಅಭಿನಂದನೆ ಸಲ್ಲಿಸಿದರು.
ಉಪಾಧ್ಯಕ್ಷ ಬಸವರಾಜ ತಟವಟಿ, ಶಂಕರಣ್ಣ ಮುನವಳ್ಳಿ, ಎಸ್.ಸಿ.ಮೆಟಗುಡ್ಡ, ಡಾ.ವಿ.ಎಸ್.ಸಾಧುನವರ, ಜಯಾನಂದ ಮುನವಳ್ಳಿ, ಡಾ.ವಿ.ಐ.ಪಾಟೀಲ, ಅಮಿತ ಕೋರೆ, ಡಾ.ಪ್ರೀತಿ ದೊಡವಾಡ ಸೇರಿದಂತೆ ಸದಸ್ಯರು, ಆಜೀವ ಸದಸ್ಯರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net