ಬೈಲಹೊಂಗಲ: ಭವ್ಯ ರಾಷ್ಟ್ರ ಕಟ್ಟುವಲ್ಲಿ ಹಳ್ಳಿ ವಿದ್ಯಾರ್ಥಿಗಳ ಪಾತ್ರ ಬಹು ಮುಖ್ಯವಾದದ್ದು ಹಳ್ಳಿಗಳ ಸರ್ಕಾರಿ ಶಾಲೆ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಸತತ ಪ್ರಯತ್ನ ಮಾಡಲಾಗುತ್ತಿದೆ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ತಾಲೂಕಿನ ಸಂಪಗಾವಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ನಂ.೪ರಲ್ಲಿ ವಿಶ್ವ ಮಾನವ ಬಂದುತ್ವ ವೇದಿಕೆ ಹಾಗೂ ಶೈಕ್ಷಣಿಕ ಜಾಗೃತ ವೇದಿಕೆ ಆಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ೨೫ನೇ ವರ್ಷದ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಪಗಾವಿ ಕಟಾಪೂರಿಮಠದ ಷಟಸ್ಥಲ ಬ್ರಹ್ಮ ಚನ್ನವೀರ ಸ್ವಾಮೀಜಿ, ಬೈಲಹೊಂಗಲದ ಮೂರು ಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ನಿರ್ದೇಶಕ ಡಾ.ಮಹಾಂತೇಶ ಶಾಸ್ತ್ರೀ ಆರಾದ್ರಿಮಠ, ಮಂಜುನಾಥ ಶಿಡ್ಲೆವ್ವಗೋಳ, ತಹಸೀಲ್ದಾರ್ ಹನುಮಂತ ಶಿರಹಟ್ಟಿ, ಜಿಪಂ ಮಾಜಿ ಸದಸ್ಯೆ ರೋಹಿಣಿ ಪಾಟೀಲ, ಡಿಸಿಸಿ ಬ್ಯಾಂಕ್ ನಿರ್ದೇಶಕ ನಾನಾಸಾಹೇಬ ಪಾಟೀಲ, ಶಂಕ್ರೆಪ್ಪ