ಭಾಷೆ ಕಟ್ಟುವಲ್ಲಿ ಚುಟುಕುಗಳ ಪಾತ್ರ ಹಿರಿದು

ಅಥಣಿಯಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಕನ್ನಡ ಸೇವಾರ್ಥಿಗಳನ್ನು ಸನ್ಮಾನಿಸಲಾಯಿತು. ಅಪ್ಪಾಸಾಹೇಬ ಅಲಿಬಾದಿ, ಡಾ.ಜೆ.ಪಿ.ದೊಡಮನಿ ಇತರರಿದ್ದರು.
ಅಥಣಿಯಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಕನ್ನಡ ಸೇವಾರ್ಥಿಗಳನ್ನು ಸನ್ಮಾನಿಸಲಾಯಿತು. ಅಪ್ಪಾಸಾಹೇಬ ಅಲಿಬಾದಿ, ಡಾ.ಜೆ.ಪಿ.ದೊಡಮನಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಪ್ಪಾಸಾಹೇಬ ಅಲಿಬಾದಿ ಅಭಿಮತ
  • ಅಥಣಿಯಲ್ಲಿ ರಾಜಮಟ್ಟದ ಚುಟುಕು ಕವಿಗೋಷ್ಠಿ
ಅಥಣಿ: ಕನ್ನಡ ಕಾವ್ಯ ಪರಂಪರೆಯಲ್ಲಿ ಚುಟುಕು ಸಾಹಿತ್ಯದ ಪಾತ್ರ ಮಹತ್ವವಾದದ್ದು, ಪ್ರಚಲಿತ ವಿದ್ಯಮಾನಗಳ ಬಗ್ಗೆ ಬೆಳಕು ಚೆಲುವ ಮೂರ್ನಾಲ್ಕು ಸಾಲುಗಳ ಚುಟುಕು ಪದಗಳು ಜನಪರ ವಿಶ್ವಾಸಗಳಿಸಿವೆ. ಕನ್ನಡದ ಮನಸ್ಸುಗಳನ್ನು ಕಟ್ಟುವಲ್ಲಿ ಚುಟುಕು ಸಾಹಿತ್ಯದ ಪಾತ್ರ ಹಿರಿದಾಗಿದೆ ಎಂದು ಹಿರಿಯ ಸಾಹಿತಿ ಅಪ್ಪಾಸಾಹೇಬ ಅಲಿಬಾದಿ ಹೇಳಿದರು.
ಪಟ್ಟಣದಲ್ಲಿ ಚುಟುಕು ಸಾಹಿತ್ಯ ಪರಿಷತ್ ಹಾಗೂ ಮಹಾತ್ಮ ಜ್ಯೋತಿ ಬಾಫುಲೆ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ 70ನೇ ಕನ್ನಡ ರಾಜ್ಯೋತ್ಸವದ ಈಚೆಗೆ ಅಂಗವಾಗಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಚುಟುಕು ಕವಿಗೋಷ್ಠಿ ಹಾಗೂ ಕನ್ನಡ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಕಾವ್ಯ ಮತ್ತು ಚುಟುಕು ಸಾಹಿತ್ಯ ಯಾರ ಸ್ವತ್ತಲ್ಲ, ಒಬ್ಬ ಕವಿ ತನ್ನ ಮತ್ತು ಜನಸಾಮಾನ್ಯರ ಭಾವನೆಗಳನ್ನು ಕಡಿಮೆ ಸಾಲುಗಳಲ್ಲಿ ಹೇಳುವ ಸಾಹಿತ್ಯವೇ ಚುಟುಕು.
ಚುಟುಕು ಸಾಹಿತ್ಯಕ್ಕೆ ತನ್ನದೇ ಆದ ಇತಿಹಾಸವಿದೆ. ಸರ್ವಜ್ಞನ ತ್ರಿಪದಿಯಿಂದ, ಶರಣರ ವಚನ ಸಾಹಿತ್ಯ, ಹನಿಗವನ ಸೇರಿ ಅನೇಕ ಚಿಕ್ಕ ಕವನಗಳು ಚುಟುಕು ಸಾಹಿತ್ಯದಲ್ಲಿ ಬರುತ್ತವೆ. ಚುಟುಕು ಸಾಹಿತ್ಯ ಪರಿಷತ್ ವಿದ್ಯಾರ್ಥಿಗಳಿಗೆ ಮತ್ತು ಯುವ ಸಾಹಿತಿಗಳಿಗೆ ಕಾವ್ಯ ಕಟ್ಟುವ ಭಾವನೆ ಪ್ರೇರೇಪಿಸುವ ಜತೆ ರಾಜ್ಯದ್ಯಂತ ಅನೇಕ ಚುಟುಕು ಸಾಹಿತ್ಯ ಸಮ್ಮೇಳನಗಳನ್ನು ನಡೆಸಿದೆ. ಇತ್ತೀಚಿಗೆ ಬೆಳಗಾವಿಯಲ್ಲಿ ಜರುಗಿದ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷನಾಗಿ ಭಾಗವಹಿಸಿದ್ದು ಸಂತಸ ತಂದಿದೆ ಎಂದರು.
ಹಿರಿಯ ಅನುವಾದಕ ಸಾಹಿತಿ ಡಾ.ಜೆ.ಪಿ.ದೊಡಮನಿ ಮಾತನಾಡಿ, ಕನ್ನಡ ಸೇವೆಯಲ್ಲಿ ನಿರತರಾಗಿರುವ ಸಾಧಕರನ್ನು ಗುರುತಿಸಿ ಸನ್ಮಾನಿಸಿ, ಪ್ರೋತ್ಸಾಹಿಸುವ ಕಾರ್ಯ ಶ್ಲಾಘನೀಯ ಎಂದರು.
ಉದ್ಯಮಿ ರವಿ ಪೂಜಾರಿ ಮಾತನಾಡಿದರು.ದೇವೇಂದ್ರ ಬಿಸ್ವಾಗರ, ಪ್ರಕಾಶ ಖೋತ, ಕೈಲಾಸ ಮದಭಾವಿ, ಕುಮಾರ ತಳವಾರ, ಭಾರತಿ ಅಲಿಬಾದಿ ಸೇರಿ 55ಕ್ಕೂ ಹೆಚ್ಚು ಕವಿಗಳು ಚುಟುಕು ಕವನ ವಾಚಿಸಿದರು.
ಪತ್ರಕರ್ತ ಅಣ್ಣಾಸಾಹೇಬ ತೆಲಸಂಗ, ಆಕಾಶ ನಂದಗಾವ, ಜೆ.ಪಿ.ದೊಡಮನಿ, ಪ್ರಭಾವತಿ ಬೋರಗಾಂವಕರ, ನಿಜಪ್ಪ ಹಿರೇಮನಿ, ಮಹಾದೇವ ಬಿರಾದಾರ, ಬಸವರಾಜ ಮಾಳಿ ಮತ್ತು ಕೈಲಾಸ ಮದಬಾವಿ ಅವರನ್ನು ಸನ್ಮಾನಿಸಲಾಯಿತು.
ಯೋಗ ಶಿಕ್ಷಕ ಹಾಗೂ ಸಾಹಿತಿ ಎಸ್.ಕೆ.ಹೊಳೆಪ್ಪನವರ, ಪರಶುರಾಮ ಸೋನಕರ, ಶಿಕ್ಷಕ ಸಂತೋಷ ಬಡಕಂಬಿ, ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಆರ್.ಎಸ್.ದೊಡ್ಡನಿಂಗಪ್ಪಗೋಳ, ಕಾರ್ಯದರ್ಶಿ ಶಶಿಧರ ಬರ್ಲಿ ಇತರರಿದ್ದರು. ಎಸ್.ಕೆ.ಹೊಳೆಪ್ಪನವರ ಆಶಯ ನುಡಿಗಳನ್ನಾಡಿದರು.
ರಾಮಣ್ಣ ದೊಡ್ಡನಿಂಗಪ್ಪಗೋಳ ಸ್ವಾಗತಿಸಿದರು. ಶಶಿಧರ ಬರ್ಲಿ ನಿರೂಪಿಸಿದರು. ಸಂತೋಷ ಬಡಕಂಬಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net