ಏಳಿಗೆಯಲ್ಲಿ ಇಂಜಿನಿಯರ್ ಪಾತ್ರ ಮಹತ್ವದ್ದು

ಚಿಕ್ಕೋಡಿ ಕೆಎಲ್‌ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರ್ಸ್ ದಿನ ಆಚರಿಸಲಾಯಿತು. ಡಾ.ದರ್ಶನಕುಮಾರ ಬಿಳ್ಳೂರ, ಸೋಮಶೇಖರ ಪಟಾತ, ಪ್ರೊ.ಪ್ರದೀಪ ಹೊದ್ಲುರ, ಪ್ರೊ.ಸುಶೀಲ್‌ಕುಮಾರ ಭಗಾಟೆ, ಪ್ರೊ.ಶಂಕರಗೌಡ ಪಾಟೀಲ, ಪ್ರೊ. ವಿನಯ ಮನಗೂಳೆ, ಪ್ರೊ.ಬಾಳಪ್ಪ ನವಳಾಯಿ ಇತರರಿದ್ದರು.
ಚಿಕ್ಕೋಡಿ ಕೆಎಲ್‌ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರ್ಸ್ ದಿನ ಆಚರಿಸಲಾಯಿತು. ಡಾ.ದರ್ಶನಕುಮಾರ ಬಿಳ್ಳೂರ, ಸೋಮಶೇಖರ ಪಟಾತ, ಪ್ರೊ.ಪ್ರದೀಪ ಹೊದ್ಲುರ, ಪ್ರೊ.ಸುಶೀಲ್‌ಕುಮಾರ ಭಗಾಟೆ, ಪ್ರೊ.ಶಂಕರಗೌಡ ಪಾಟೀಲ, ಪ್ರೊ. ವಿನಯ ಮನಗೂಳೆ, ಪ್ರೊ.ಬಾಳಪ್ಪ ನವಳಾಯಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರಾಂಶುಪಾಲ ಡಾ.ದರ್ಶನ ಕುಮಾರ ಬಿಳ್ಳೂರ ಅಭಿಪ್ರಾಯ
  • ಇಂಜಿನಿಯರ್ಸ್ ಡೇ ಕಾರ್ಯಕ್ರಮ
ಚಿಕ್ಕೋಡಿ: ಸದೃಢ ಸಮಾಜ ನಿರ್ಮಾಣದಲ್ಲಿ ಹಾಗೂ ದೇಶದ ಅಭಿವೃದ್ಧಿಯಲ್ಲಿ ಇಂಜಿನಿಯರ್‌ಗಳ ಪಾತ್ರ ಮಹತ್ವದ್ದಾಗಿದೆ ಎಂದು ಕೆಎಲ್‌ಇ ಇಂಜಿನಿಯರಿಂಗ್ ಮಹಾವಿದ್ಯಾಲ ಪ್ರಾಂಶುಪಾಲ ಡಾ.ದರ್ಶನಕುಮಾರ ಬಿಳ್ಳೂರ ಅಭಿಪ್ರಾಯಪಟ್ಟರು.
ಪಟ್ಟಣದ ಕೆಎಲ್‌ಇ ಇಂಜಿನಿಯರಿಂಗ್ ಮಹಾವಿದ್ಯಾಲದಲ್ಲಿ ಮಂಗಳವಾರ ಆಯೋಜಿಸಿದ್ದ ಇಂಜಿನಿಯರ್ಸ್ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್.ಎಂ.ವಿಶ್ವೇಶ್ವರಯ್ಯ ಅವರು ತಮ್ಮ ಜ್ಞಾನ, ಕೌಶಲ, ಶಿಸ್ತು ಮತ್ತು ಸೇವಾಭಾವನೆ ಮೂಲಕ ಸಮಾಜ ಹಾಗೂ ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ವಿದ್ಯಾರ್ಥಿಗಳು ಕೂಡ ಇಂಜಿನಿಯರಿಂಗ್ ಜ್ಞಾನ ಮತ್ತು ಕೌಶಲ ಸಮಾಜದ ಒಳಿತಿಗಾಗಿ ಬಳಸಿಕೊಂಡು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದರು.
ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ಸೋಮಶೇಖರ ಪಟಾತ ಮಾತನಾಡಿ, ಸುಸ್ಥಿರ ಅಭಿವೃದ್ಧಿ, ಮೂಲಸೌಕರ್ಯ ಅಭಿವೃದ್ಧಿ, ಪರಿಸರ ಸಂರಕ್ಷಣೆ ಹಾಗೂ ನೈಜ ಜೀವನದ ಸಮಸ್ಯೆಗಳಿಗೆ ನವೀನ ಪರಿಹಾರ ಕಂಡುಹಿಡಿಯುವಲ್ಲಿ ಇಂಜಿನಿಯರ್‌ಗಳ ಜವಾಬ್ದಾರಿ ಪ್ರಮುಖವಾಗಿದೆ. ಕೃತಕ ಬುದ್ಧಿಮತ್ತೆ (ಎಐ) ಬಳಕೆ, ವಿನ್ಯಾಸ, ನಿರ್ಮಾಣ, ಯೋಜನೆ, ಮೂಲಸೌಕರ್ಯ ನಿರ್ವಹಣೆ ಮತ್ತು ತಾಂತ್ರಿಕ ನಿರ್ಧಾರ ಕೈಗೊಳ್ಳುವಿಕೆಯಲ್ಲಿ ಭವಿಷ್ಯದ ಸಾಧ್ಯತೆಗಳ ಕುರಿತು ಮಾಹಿತಿ ನೀಡಿದರು.
ಸಿವಿಲ್ ವಿಭಾಗದ ಮುಖ್ಯಸ್ಥ ಪ್ರೊ.ಪ್ರದೀಪ ಹೊದ್ಲುರ, ಪ್ರೊ.ಸುಶೀಲ್‌ಕುಮಾರ ಭಗಾಟೆ, ಪ್ರೊ.ಶಂಕರಗೌಡ ಪಾಟೀಲ, ಪ್ರೊ.ವಿನಯ ಮನಗೂಳೆ, ಪ್ರೊ.ಬಾಳಪ್ಪ ನವಳಾಯಿ, ಪ್ರೊ.ಸವಿತಾ ಮಾಳಿ, ಪ್ರೊ.ರಂಜನಿ ಚವ್ಹಾಣ, ಡಾ.ಸುನೀಲ ಶಿಂಧೆ, ಡಾ.ಸಂಜಯ ಹನಗಂಡಿ, ಡಾ.ಕುಮಾರ ಚೌಗಲಾ, ಡಾ.ವೀರಣ್ಣ ಮೋದಿ, ಡಾ.ಸಂಜಯ ಪೂಜೇರಿ, ಡಾ.ಸುರೇಶ ಕುಂಬಾರ, ಡಾ.ಮಹಾಂತೇಶ ಮಠಪತಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net