ದೇಸಿ ಕ್ರೀಡೆಗಳ ಆಯೋಜನೆ ಶ್ಲಾಘನೀಯ

ಐನಾಪುರ ಪಟ್ಟಣದಲ್ಲಿ ಶಾಸಕ ಲಕ್ಷ್ಮಣ ಸವದಿ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಯನ್ನು ಚಿದಾನಂದ ಸವದಿ ಉದ್ಘಾಟಿಸಿದರು. ಪ್ರವೀಣ ಗಾಣಿಗೇರ, ಶಿವಕುಮಾರ ಸವದಿ, ಸುಭಾಸ ಪಾಟೀಲ, ಚಮನರಾವ ಪಾಟೀಲ, ವಿನಾಯಕ ಬಾಗಡಿ ಇತರರಿದ್ದರು.
ಐನಾಪುರ ಪಟ್ಟಣದಲ್ಲಿ ಶಾಸಕ ಲಕ್ಷ್ಮಣ ಸವದಿ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಯನ್ನು ಚಿದಾನಂದ ಸವದಿ ಉದ್ಘಾಟಿಸಿದರು. ಪ್ರವೀಣ ಗಾಣಿಗೇರ, ಶಿವಕುಮಾರ ಸವದಿ, ಸುಭಾಸ ಪಾಟೀಲ, ಚಮನರಾವ ಪಾಟೀಲ, ವಿನಾಯಕ ಬಾಗಡಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಯುವ ಮುಖಂಡ ಚಿದಾನಂದ ಸವದಿ ಮೆಚ್ಚುಗೆ
  • ಕಬಡ್ಡಿ ಪಂದ್ಯಾವಳಿ
ಐನಾಪುರ: ರಾಷ್ಟ್ರಮಟ್ಟದ ಪುರುಷರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು ಯುವ ಮುಖಂಡ ಚಿದಾನಂದ ಸವದಿ ಹೇಳಿದರು.
ಪಟ್ಟಣದ ಪಿಎಂಶ್ರೀ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಶಾಸಕ ಲಕ್ಷ್ಮಣ ಸವದಿ ಅವರ ೬೬ನೇ ಜನ್ಮದಿನದ ಅಂಗವಾಗಿ ಚಿದಾನಂದ ಸವದಿ ಕಾಗವಾಡ ಅಭಿಮಾನಿಗಳ ಬಳಗದಿಂದ ಭಾನುವಾರ ಹಮ್ಮಿಕೊಂಡಿದ್ದ ಅಖಿಲ ಭಾರತ `ಎ' ಗ್ರೇಡ್ ಪುರುಷರ ಕಬಡ್ಡಿ ಹೊನಲು ಬೆಳಕಿನ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ಕ್ರಿಕೆಟ್‌ನಂತಹ ಆಟಗಳ ಅಬ್ಬರದಲ್ಲಿ ದೇಸಿ ಕ್ರೀಡೆಗಳು ಮಾಯವಾಗುತ್ತಿವೆ. ಆದರೆ, ಐನಾಪುರ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಕಬಡ್ಡಿ ಆಟವನ್ನು ಉಳಿಸಿ ಬೆಳೆಸುತ್ತಿರುವುದು ಶ್ಲಾಘನೀಯ ಎಂದರು.
ರಾಜ್ಯ ಕಬ್ಬಡಿ ಅಸೋಸಿಯೇಷನ್ ರಾಜ್ಯ ಸಂಚಾಲಕ ಶಿವಣ್ಣ ಹಾಗೂ ಚಿಕ್ಕೋಡಿ ಜಿಲ್ಲಾ ಕಬಡ್ಡಿ ಅಸೋಸಿಯೇಷನ್ ಉಪಾಧ್ಯಕ್ಷ ಎಂ.ಕೆ.ಶಿರಗುಪ್ಪಿ ನೇತೃತ್ವದಲ್ಲಿ ರಾಜಸ್ಥಾನ, ಹಿಮಾಚಲ ಪ್ರದೇಶ, ಹರಿಯಾಣ, ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ೨೪ತಂಡಗಳ ಪಂದ್ಯಗಳನ್ನು ಲೀಗ್ ಕಮ್ ನಾಕೌಟ್ ಪದ್ಧತಿಯಲ್ಲಿ ನಡೆಸಲಾಯಿತು.
ಪ್ರವೀಣ ಗಾಣಿಗೇರ, ವಕೀಲ ಸಂಜಯ ಕುಚನೂರೆ, ಅರುಣ ಗಾಣಿಗೇರ, ದಾದಾ ಜಂತೆನ್ನವರ, ಸಂತೋಷ ಪಾಟೀಲ, ಸುಭಾಷ ಪಾಟೀಲ, ಚಮನರಾವ ಪಾಟೀಲ, ವಿನಾಯಕ ಬಾಗಡಿ, ಸೌರಭ ಪಾಟೀಲ, ಜಡೆಪ್ಪ ಕುಂಬಾರ, ರಾಮನಗೌಡ ಪಾಟೀಲ, ಸಂಜಯ ತಳವಲಕರ, ಸಿದ್ದಪ್ಪ ಕನಾಳೆ, ಅಪ್ಪು ನೇಮಗೌಡರ ಇತರರಿದ್ದರು. ಅಖಿಲ ಕರ್ನಾಟಕ ಅಮೆಚೂರ ಅಸೋಸಿಯೇಶನ್ ತಾಲೂಕು ಅಧ್ಯಕ್ಷ ಅಪ್ಪು ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರೇಶ ವಾಘಮೋರೆ ನಿರೂಪಿಸಿದರು. ಸಂಜು ಭಿರಡಿ ಸ್ವಾಗತಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net