ಸರ್ವವ್ಯಾಪಿ ಸಿದ್ಧೇಶ್ವರ ಸ್ವಾಮೀಜಿ

ಬೆಳಗಾವಿಯ ಎಮಿನೆಂಟ್ ಕೋಚಿಂಗ್ ಕ್ಲಾಸಿಸ್‌ನಲ್ಲಿ ಸೋಮವಾರ ಸಿದ್ಧೇಶ್ವರ ಶ್ರೀಗಳ ಪುಣ್ಯಸ್ಮರಣೆಯಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮಂಜುನಾಥ ಕೌಲಗಿ, ಉದಯ ಇಡಗಲ್, ಭಾಗ್ಯಲಕ್ಷ್ಮೀ ಕೌಲಗಿ, ಸದಾಶಿವ ಸೋರಗಾವಿ, ಸದಾನಂದ ಬಡ್ಡೂರ ಇತರರಿದ್ದರು.
ಬೆಳಗಾವಿಯ ಎಮಿನೆಂಟ್ ಕೋಚಿಂಗ್ ಕ್ಲಾಸಿಸ್‌ನಲ್ಲಿ ಸೋಮವಾರ ಸಿದ್ಧೇಶ್ವರ ಶ್ರೀಗಳ ಪುಣ್ಯಸ್ಮರಣೆಯಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮಂಜುನಾಥ ಕೌಲಗಿ, ಉದಯ ಇಡಗಲ್, ಭಾಗ್ಯಲಕ್ಷ್ಮೀ ಕೌಲಗಿ, ಸದಾಶಿವ ಸೋರಗಾವಿ, ಸದಾನಂದ ಬಡ್ಡೂರ ಇತರರಿದ್ದರು.
Published on
ಬೆಳಗಾವಿ: ಮಹಾತ್ಮರಾದವರು ಜೀವಿತಾವಧಿಯಲ್ಲಿ ಯಾವುದಾದರೂ ಒಂದು ಸ್ಥಳದಲ್ಲಿ ಸಿಗುತ್ತಿರುತ್ತಾರೆ. ಆದರೆ, ದೇಹತ್ಯಾಗ ಮಾಡಿದ ಬಳಿಕ ಎಲ್ಲೆಡೆಯೂ ಇರುತ್ತಾರೆ. ಅಂತಹ ಮಹಾತ್ಮರ ಪೈಕಿ ಸಿದ್ಧೇಶ್ವರ ಶ್ರೀಗಳು ಸಹ ಒಬ್ಬರು ಎಂದು ಎಮಿನೆಂಟ್ ಕೋಚಿಂಗ್ ಕ್ಲಾಸಿಸ್ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಮಂಜುನಾಥ ಕೌಲಗಿ ಹೇಳಿದರು.
ನಗರದ ಎಮಿನೆಂಟ್ ಕೋಚಿಂಗ್ ಕ್ಲಾಸಿಸ್‌ನಲ್ಲಿ ಸೋಮವಾರ ಸಿದ್ಧೇಶ್ವರ ಶ್ರೀಗಳ 3ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಸ್ವಾಮೀಜಿ ನವನೀತದಷ್ಟು ಮೃಧು, ಸಾಗರದಷ್ಟು ಜ್ಞಾನವುಳ್ಳವರು. ಸರ್ವರಿಗೂ ಲೇಸನ್ನು ಬಯಸಿದ ಮಹಾಪುರುಷ, ತತ್ತ್ವಜ್ಞಾನಿ, ಬಹುಭಾಷಾ ಪಂಡಿತ, ಶತಮಾನದ ಸಂತ, ನಡೆದಾಡುವ ದೇವರಾಗಿ ನಮ್ಮ ಮುಂದೆ ಇದ್ದರು. 20ನೇ ಶತಮಾನದಲ್ಲಿ ವಿಶ್ವದ ಅನೇಕರ ಜೀವನದಲ್ಲಿ ಪರಿವರ್ತನೆ ತಂದ ಮಹಾತ್ಮ ಅವರಾಗಿದ್ದಾರೆ ಎಂದು ಬಣ್ಣಿಸಿದರು.
ಸರಳ ಜೀವಿಯಾಗಿದ್ದ ಶ್ರೀಗಳು, ಜೇಬಿಲ್ಲದ ಶ್ವೇತವರ್ಣದ ಬಟ್ಟೆ ತೊಟ್ಟು, ಆ ಬಟ್ಟೆಗಳನ್ನು ತಾವೇ ತೊಳೆದುಕೊಳ್ಳುತ್ತಿದ್ದರು. ಅಧ್ಯಯನ, ಅಧ್ಯಾಪನದ ಮೂಲಕ ಅನೇಕರಿಗೆ ಆಶೀರ್ವಾದ ಮಾಡಿದ್ದಾರೆ. ಅವರ ಅಮರವಾಣಿಗಳು ಇವತ್ತು ಪುಸ್ತಕ ಮತ್ತು ದೃಶ್ಯರೂಪದಲ್ಲಿ ಲಭ್ಯವಿದ್ದು, ಅದನ್ನು ಓದಿ, ಕೇಳಿ ಪುನೀತರಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸೇಂಟ್ ಜರ್ಮನ್ ಸ್ಕೂಲ್ ಚೇರ್ಮನ್ ಉದಯ ಇಡಗಲ್ ಮಾತನಾಡಿ, ವಿದ್ಯುತ್‌ನ್ನು ಹೊರಗಡೆಯಿಂದ ನೋಡಲಾಗದು. ತಂತಿ ಮೂಲಕ ಬಲ್ಬ್‌ಗೆ ಸಂಪರ್ಕಿಸಿದಾಗ ಬೆಳಕು ಬರುತ್ತದೆ. ಹೀಗೆಯೇ ಸಿದ್ಧೇಶ್ವರ ಶ್ರೀಗಳು ಇಂದು ನಮ್ಮೊಂದಿಗಿದ್ದಾರೆ. ಅವರ ಅಮೃತವಾಣಿಗಳಿಂದ ನಮ್ಮ ಜೀವನದಲ್ಲಿ ಜ್ಞಾನದ ಬೆಳಕು ಮೂಡುತ್ತದೆ ಎಂದರು.
ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಪಡೆಯುತ್ತಿರುವ ಅವಧಿಯಲ್ಲಿ ಅತ್ಯುತ್ತಮ ಫಲಿತಾಂಶ ಪಡೆದ ಮಕ್ಕಳಿಗೆ ಪ್ರೋತ್ಸಾಹದಾಯಕ ಬಹುಮಾನ ನೀಡಲಾಯಿತು. ಸಂಸ್ಥೆಯ ಕಾರ್ಯಾಧ್ಯಕ್ಷೆ ಭಾಗ್ಯಲಕ್ಷ್ಮೀ ಕೌಲಗಿ ಇತರರಿದ್ದರು.
ಸದಾಶಿವ ಸೋರಗಾವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಮಲಾ ಗೊರಗುದ್ದಿ ಪ್ರಾರ್ಥಿಸಿದರು. ಅಕ್ಷತಾ ಮಹಾಜನ ನಿರೂಪಿಸಿದರು. ಆಡಳಿತಾಧಿಕಾರಿ ಸದಾನಂದ ಬಡ್ಡೂರ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net