ರಾಮದುರ್ಗ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಪುಸ್ತಕಗಳ ಬಿಡುಗಡೆ ಮತ್ತು ಕವಿಗೋಷ್ಠಿ ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರು ಉದ್ಘಾಟಿಸಿದರು. ಪ್ರೊ.ಎಸ್.ಎಂ. ಸಕ್ರಿ, ಆರ್.ಎಸ್.ಪಾಟೀಲ, ಐ.ಪಿ. ಮುಳ್ಳೂರ ಇದ್ದರು.
ರಾಮದುರ್ಗ: ಸಾಹಿತ್ಯ ಕ್ಷೇತ್ರಕ್ಕೆ ರಾಮದುರ್ಗದ ಸಾಹಿತಿಗಳು ಅಪಾರ ಕೊಡುಗೆ ನೀಡಿದ್ದು, ಸಾಂಸ್ಕೃತಿಕ ಪರಂಪರೆ ಮತ್ತು ಪ್ರಾಚೀನ ಬೌದ್ಧಿಕ ಸಂಪ್ರದಾಯ ಎತ್ತಿ ಹಿಡಿದಿದ್ದಾರೆ ಎಂದು ನಿವೃತ್ತ ಪ್ರಾಚಾರ್ಯ
ಪ್ರೊ.ಎಸ್.ಎಂ. ಸಕ್ರಿ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತಾಲೂಕುಘಟಕ, ಸಮುದಾಯ ಘಟಕ ಇವುಗಳ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಪುಸ್ತಕಗಳ ಬಿಡುಗಡೆ, ಕವಿಗೋಷ್ಠಿ ಹಾಗೂ ಕನಕ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾರತೀಯ ಸಾಹಿತ್ಯ ವಿವಿಧ ಸಂದರ್ಭದಲ್ಲಿ ಜಾಗತಿಕ ಚಿಂತನೆ ಮೇಲೆ ಹೆಚ್ಚು ಪ್ರಭಾವ ಬೀರಿದೆ. ಸಾಹಿತಿಗಳ ದೂರದೃಷ್ಠಿ ಹಾಗೂ ಪ್ರಯೋಗ ಪ್ರತಿ ಸಂದರ್ಭದಲ್ಲಿ ಸ್ಮರಿಸಬೇಕು ಎಂದರು.
ಸಾಹಿತಿ ಆರ್.ಎಸ್. ಪಾಟೀಲ ಅವರು ಬರೆದ 10 ಪುಸ್ತಕಗಳನ್ನು ಗಣ್ಯರು ಬಿಡುಗಡೆ ಮಾಡಿದರು. ಕೇಂದ್ರ ಸಾಹಿತ್ಯ ವೇದಿಕೆ ತಾಲೂಕು ಘಟಕ ಅಧ್ಯಕ್ಷ ಬಿ.ಯು. ಭೈರಕದಾರ, ಸಮುದಾಯ ಘಟಕದ ಸದಸ್ಯ ರಾಜಶೇಖರ ಶಲವಡಿ ಮಾತನಾಡಿದರು.
ಕೇಂದ್ರ ಸಾಹಿತ್ಯ ವೇದಿಕೆ ಗೌರವಾಧ್ಯಕ್ಷ ಐ.ಪಿ. ಮುಳ್ಳೂರ, ಪ್ರೊ. ಪಿ.ಎಲ್. ಮಿಸಾಳೆ, ಎ.ಐ. ಅತ್ತಾರ, ಸಿರಿಗನ್ನಡ ವೇದಿಕೆ ಅಧ್ಯಕ್ಷ ಸುರೇಶ ದೇಸಾಯಿ ಸೇರಿ ಸಮುದಾಯ ಘಟಕದ ಪದಾಧಿಕಾರಿಗಳು, ಸಾಹಿತಿಗಳು, ಬಿಆರ್‌ಪಿ, ಸಿಆರ್‌ಪಿ ಸಿಬ್ಬಂದಿ ಇತರರಿದ್ದರು.