ಬೆಳಗಾವಿ: ಇಲ್ಲಿನ ಕ್ಲಬ್ ರಸ್ತೆ, ಹಿಂಡಲಗಾ ಮಾರ್ಗ, ಗಾಂಧಿ ವೃತ್ತ ಹಾಗೂ ಗಾಲ್ಫ್ ಕೋರ್ಸ್ ಸುತ್ತಮುತ್ತ ಚಿರತೆ ಓಡಾಡಿದೆ ಎನ್ನಲಾಗುತ್ತಿರುವ ಐದು ಪ್ರಮುಖ ಸ್ಥಳಗಳಲ್ಲಿ ಅರಣ್ಯ ಇಲಾಖೆಯಿಂದ ಪಂಜರ ಇಡಲಾಗಿದೆ.
ಕಳೆದೊಂದು ವಾರದ ಹಿಂದೆ ಇಲ್ಲಿನ ಪೊಲೀಸ್ ಕ್ವಾರ್ಟರ್ಸ್ ಹಿಂಭಾಗ ಹಾಗೂ ಸಿಪಿಇಡಿ ರಸ್ತೆಯಲ್ಲಿ ಚಿರತೆ ಬಂದಿದೆ ಎಂಬ ವದಂತಿಯಿಂದ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.ಅರಣ್ಯ ಇಲಾಖೆ ಸಿಬ್ಬಂದಿ ನಿಗಾ ವಹಿಸಿದ್ದರೂ, ಯಾವುದೇ ಕುರುಹು ಸಿಕ್ಕಿರಲಿಲ್ಲ. ವಿವಿಧೆಡೆ ಸಿಸಿ ಕ್ಯಾಮರಾ ಅಳವಡಿಸಿದ್ದರೂ ಚಿರತೆ ಚಲನವಲನ ದಾಖಲಾಗಿಲ್ಲ.
ಇದರ ನಡುವೆ ಕಾಡು ಬೆಕ್ಕಿನ ಫೋಟೋ ವೈರಲ್ ಆಗಿ ಆತಂಕ ಸೃಷ್ಟಿಸಿತ್ತು. ಹೀಗಾಗಿ ಐದು ಕಡೆ ಪಂಜರ ಇಟ್ಟು ಅರಣ್ಯ ಇಲಾಖೆ ಸಿಬ್ಬಂದಿ ನಿಗಾ ವಹಿಸಿದ್ದಾರೆ.
"
ಚಿರತೆ ಚಲನವಲನದ ಬಗ್ಗೆ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ. ಆದರೂ ಮುಂಜಾಗ್ರತೆಯಿಂದ ಪಂಜರ ಇಟ್ಟಿದ್ದೇವೆ. ಸಿಬ್ಬಂದಿ ನಿರಂತರ ನಿಗಾ ವಹಿಸಿದ್ದಾರೆ.