ಕಾಗವಾಡ: ತಾಲೂಕಿನ ಜುಗೂಳ ಗ್ರಾಮದ ಪೇಟೆಯಲ್ಲಿರುವ 15 ಅಂಗಡಿಗಳಿಗೆ ಶನಿವಾರ ಮಧ್ಯರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ಹಾನಿಗೀಡಾದ ಘಟನೆ ಸಂಭವಿಸಿದೆ. ಗ್ರಾಮದ ಸಿದ್ಧೇಶ್ವರ ನೀರಾವರಿ ಸಂಘ, ಗೋಮ್ಮಟೇಶ್ವರ ನೀರಾವರಿ ಸಂಘ, ಸಾಗರ ನೀರಾವರಿ ಸಂಘ, ಅಡಿವೆಪ್ಪ ಭನಾಜ ಜೈ ಜೀನೇಂದ್ರ ಹೋಟೆಲ್, ಪ್ರಕಾಶ ಮಡಿವಾಳ ಲಾಂಡ್ರಿ ಅಂಗಡಿ, ಸಿದ್ಧಾಂತ ಶಿರಗುಪ್ಪೆ ಕೀಟನಾಶಕ ಮತ್ತು ಕೃಷಿ ಔಷಧ ಅಂಗಡಿ, ಅಮೀತ ಶಿಂಧೆ ಸಲೂನ್, ಶೋಭಾ ಘಾಟಗೆ ಪೈಪ್ ಅಂಗಡಿ, ಭೋಲೆನಾಥ ಐಸ್ಕ್ರೀಂ ಅಂಗಡಿ, ಕುಂತಿನಾಥ ಭನಾಜ ಅಂಗಡಿ, ಮಾರುತಿ ಮಿಣಚೆ ಸ್ಟೂಡಿಯೋ ಮತ್ತು ಕಂಪ್ಯೂಟರ್ ಸೆಂಟರ್ ಹೀಗೆ ಹಲವು ಅಂಗಡಿಗಳು ಸುಟ್ಟು ಕರಕಲಾಗಿವೆ. ಕೂಡಲೇ ಸ್ಥಳಕ್ಕೆ ರಾಯಬಾಗ, ಅಥಣಿ ಮತ್ತು ಉಗಾರ ಸಕ್ಕರೆ ಕಾರ್ಖಾನೆ ಅಗ್ನಿಶಾಮಕ ದಳಗಳು ಆಗಮಿಸಿ, ಬೆಂಕಿನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿವೆ.