ಶೂರ ಸಂಗೊಳ್ಳಿ ರಾಯಣ್ಣ ದೇಶಪ್ರೇಮದ ಸಂಕೇತ

ಅಥಣಿ ಪಟ್ಟಣದಲ್ಲಿ ಸಂಗೊಳ್ಳಿ ರಾಯಣ್ಣ ಅಮರ ಜ್ಯೋತಿ ಸ್ವಾಗತಿಸಲಾಯಿತು. ಸಿದರಾಯ ಭೋಸಗಿ, ಶಿವಲೀಲಾ ಬುಟಾಳೆ, ಭುವನೇಶ್ವರಿ ಯಂಕಚ್ಚಿ ಇತರರಿದ್ದರು.
ಅಥಣಿ ಪಟ್ಟಣದಲ್ಲಿ ಸಂಗೊಳ್ಳಿ ರಾಯಣ್ಣ ಅಮರ ಜ್ಯೋತಿ ಸ್ವಾಗತಿಸಲಾಯಿತು. ಸಿದರಾಯ ಭೋಸಗಿ, ಶಿವಲೀಲಾ ಬುಟಾಳೆ, ಭುವನೇಶ್ವರಿ ಯಂಕಚ್ಚಿ ಇತರರಿದ್ದರು.
Published on
ಅಥಣಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಾಡಿನ ಸ್ವಾಭಿಮಾನ ಮತ್ತು ದೇಶಪ್ರೇಮದ ಸಂಕೇತ ಎಂದು ತಹಸೀಲ್ದಾರ್ ಸಿದರಾಯ ಭೋಸಗಿ ಹೇಳಿದರು.
ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ತಾಲೂಕಾಡಳಿತದಿಂದ ಸಂಗೊಳ್ಳಿ ರಾಯಣ್ಣ ಜ್ಯೋತಿಯನ್ನು ಶನಿವಾರ ಬರಮಾಡಿಕೊಂಡು ಮಾತನಾಡಿದರು. ಪ್ರತಿಯೊಬ್ಬರೂ ರಾಯಣ್ಣನ ದೇಶಭಕ್ತಿ ಮತ್ತು ಧೈರ್ಯ ಅಳವಡಿಸಿಕೊಳ್ಳಬೇಕು ಎಂದರು.
ಯುವ ಮುಖಂಡ ಚಿದಾನಂದ ಸವದಿ ಮಾತನಾಡಿ ರಾಯಣ್ಣನ ಹೋರಾಟದ ಹಾದಿ ಯುವ ಸಮುದಾಯಕ್ಕೆ ಸೂರ್ತಿ. ಎಲ್ಲರೂ ಅವರ ಆದರ್ಶ ಪಾಲಿಸಬೇಕು ಎಂದು ಹೇಳಿದರು.
ಪುರಸಭೆ ಅಧ್ಯಕ್ಷೆ ಶಿವಲೀಲಾ ಬುಟಾಳೆ ಮಾತನಾಡಿದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯಮೇಳಗಳೊಂದಿಗೆ ಮೆರವಣಿಗೆ ಸಾಗಿ ರಾಯಬಾಗ ತಾಲೂಕಿಗೆ ಬೀಳ್ಕೊಡಲಾಯಿತು.
ಪುರಸಭೆ ಉಪಾಧ್ಯಕ್ಷೆ ಭುವನೇಶ್ವರಿ ಯಂಕಚ್ಚಿ, ಗಣ್ಯರಾದ ಎಸ್.ಕೆ.ಬುಟಾಳೆ, ಕಲ್ಲಪ್ಪ ಮೇತ್ರಿ, ಮಂಜುನಾಥ ಸೌಂದಲಗೇಕರ, ಜಗನ್ನಾಥ ಬಾಮನೆ, ಎ.ಎಸ್.ತೆಲಸಂಗ, ಉದಯ ಮಾಕಾಣಿ, ಶ್ರೀಶೈಲ ಪಾಟೀಲ, ಎಸ್.ಎಸ್.ಹೂಟಿ, ಶಂಕರ ಹಳ್ಳದಮಳ, ನಿಲಂ ಹಿರೇಮಠ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net