ಈಗಾಗಲೇ ಬೆಳಗಾವಿ, ತುಮಕೂರು, ಧಾರವಾಡ, ವಿಜಯಪುರ, ಬಾಗಲಕೋಟೆ, ಕೋಲಾರ, ಬಳ್ಳಾರಿ, ಕಲಬುರ್ಗಿ, ಹಾಸನ, ಕೊಪ್ಪಳ, ಚಿತ್ರದುರ್ಗ ಸೇರಿ ವಿವಿಧ ಜಿಲ್ಲೆಗಳಲ್ಲಿರುವ ದೊಡ್ಡ ಗ್ರಾಪಂ ಗುರುತಿಸಿದೆ. 2026 ಫೆಬ್ರವರಿಯಲ್ಲಿ ಬಹುತೇಕ ಗ್ರಾಪಂ ಆಡಳಿತ ಮಂಡಳಿ ಸದಸ್ಯರ ಅವಧಿ ಪೂರ್ಣಗೊಳ್ಳಲಿದೆ. ಹೊಸದಾಗಿ ಚುನಾವಣೆ ಘೋಷಣೆ ಮುನ್ನವೇ ಗ್ರಾಪಂ ವಿಭಜಿಸಿ ಹೊಸ ಗ್ರಾಪಂ ರಚನೆಗೆ ಗ್ರಾಮೀಣ ಪಂಚಾಯತ್ ರಾಜ್, ಜಿಲ್ಲಾಡಳಿದ ಪ್ರಸ್ತಾವನೆಗೆ ಸರ್ಕಾರವು ಸಕಾರಾತ್ಮಕವಾಗಿ ಸ್ಪಂದಿಸಿದೆ.