ಕೊಕಟನೂರ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಪ್ರವಚನ ಸಮಾರಂಭವನ್ನು ಜಿಪಂ ಮಾಜಿ ಸದಸ್ಯ ಸಿದ್ದಪ್ಪ ಮುದಕಣ್ಣವರ ಉದ್ಘಾಟಿಸಿದರು. ಗುರುನಾಥ ಶಾಸಿö, ಗುರುಮೂರ್ತಯ್ಯ ಕಾಡದೇವರಮಠ, ಮಲಗೌಡ ನೇಮಗೌಡ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಸಿದ್ದಪ್ಪ ಮುದಕಣ್ಣವರ ಅಭಿಮತ
ವೀರಭದ್ರೇಶ್ವರ ಜಾತ್ರೋತ್ಸವ ಪ್ರವಚನ ಸಮಾರಂಭ
ಅಥಣಿ ಗ್ರಾಮೀಣ: ಸಂಸ್ಕಾರಯುತ ಜೀವನ ಸಾಗಿಸಲು ಮಹಾತ್ಮರ ನುಡಿಮುತ್ತುಗಳು, ಪ್ರವಚನಗಳು ಸಹಕಾರಿಯಾಗಲಿವೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿದ್ದಪ್ಪ ಮುದಕಣ್ಣವರ ಹೇಳಿದರು.
ಅಥಣಿ ತಾಲೂಕಿನ ಕೊಕಟನೂರ ಗ್ರಾಮದಲ್ಲಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ಪ್ರವಚನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಜೀವನದಲ್ಲಾಗುವ ಏರು-ಪೇರುಗಳನ್ನು ಎದುರಿಸುವ ಬಗೆ ಸತ್ಸಂಗ ಕಲಿಸಿಕೊಡುತ್ತದೆ. ಕೊಕಟನೂರ ಗ್ರಾಮದ ಕಲ್ಮೇಶ್ವರ ದೇವಸ್ಥಾನ ಪ್ರಸಿದ್ಧವಾಗಿದ್ದು, ಹಲವು ರಾಜ್ಯಗಳ ಲಕ್ಷಾಂತರ ಭಕ್ತರು ನಡೆದುಕೊಳ್ಳುತ್ತಾರೆ. ಜತೆಗೆ ರೇಣುಕಾ ಯಲ್ಲಮ್ಮದೇವಿ ನೆಲೆಸಿದ ಪುಣ್ಯಭೂಮಿಯಾಗಿದೆ. ಧಾರ್ಮಿಕ ಕಾರ್ಯಕ್ರಮ ಸನ್ಮಾರ್ಗಕ್ಕೆ ದಾರಿದೀಪವಾಗುತ್ತವೆ ಎಂದರು.
ಕರೀಕಟ್ಟಿಯ ಗುರುನಾಥ ಶಾಸಿö ಪ್ರವಚನ ನೀಡಿ ಮಾತನಾಡಿ, ಮನುಷ್ಯನಾಗಿ ಅತಿಯಾಗಿ ಸಂಪತ್ತಿನ ಬೆನ್ನು ಹತ್ತಿ ಸಂಬಂಧ ಕಳೆದುಕೊಳ್ಳಬಾರದು. ದಿನಾಲೂ ಪುಣ್ಯ- ಪುರುಷರ ನುಡಿ ಆಲಿಸಿದರೆ ಭಗವಂತ ಒಳಿತು ಮಾಡುತ್ತಾನೆ ಎಂದರು.