ಕಾರ್ಯಕರ್ತರ ಆಗಮನದಿಂದ ಆನೆಬಲ

ನಿಪ್ಪಾಣಿಯಲ್ಲಿ  ಬಿಜೆಪಿಗೆ ಸೇರ್ಪಡೆಗೊಂಡ 50ಕ್ಕೂ ಹೆಚ್ಚು ಮುಖಂಡರನ್ನು ಶಶಿಕಲಾ ಜೊಲ್ಲೆ ಹಾಗೂ ಅಣ್ಣಾಸಾಹೇಬ ಜೊಲ್ಲೆ ಸ್ವಾಗತಿಸಿದರು. ಶರದ ಜಂಗಟೆ, ಶ್ರೀಕಾಂತ ಬನ್ನೆ, ಸಮಿತ ಸಾಸನೆ ಇತರರಿದ್ದರು.
ನಿಪ್ಪಾಣಿಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡ 50ಕ್ಕೂ ಹೆಚ್ಚು ಮುಖಂಡರನ್ನು ಶಶಿಕಲಾ ಜೊಲ್ಲೆ ಹಾಗೂ ಅಣ್ಣಾಸಾಹೇಬ ಜೊಲ್ಲೆ ಸ್ವಾಗತಿಸಿದರು. ಶರದ ಜಂಗಟೆ, ಶ್ರೀಕಾಂತ ಬನ್ನೆ, ಸಮಿತ ಸಾಸನೆ ಇತರರಿದ್ದರು.
Published on
ನಿಪ್ಪಾಣಿ: ಕಾಂಗ್ರೆಸ್ ಮತ್ತು ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಆಗಮನದಿಂದ ಕ್ಷೇತ್ರದಲ್ಲಿ ಬಿಜೆಪಿಯ ಬಲ ಮತ್ತಷ್ಟು ಹೆಚ್ಚಿದೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರದ ಅಭಿವೃದ್ಧಿ ಕಾರ್ಯ ಹಾಗೂ ನಿಪ್ಪಾಣಿ ಕ್ಷೇತ್ರದಲ್ಲಿ ತಾವು ಕೈಗೊಂಡಿರುವ ಅಭಿವೃದ್ಧಿ ಕಾರ್ಯ ಮೆಚ್ಚಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ ಎಂದರು.
ತಾಲೂಕಿನ ಕಾರದಗಾ ಗ್ರಾಮದ ಜಿಪಂ ಮಾಜಿ ಸದಸ್ಯೆ ಸುಮಿತ್ರಾ ಉಗಳೆ ಹಾಗೂ ಸುದೀಪ ಉಗಳೆ, ಕಿರಣ ಟಕಳೆ, ರಂಜಿತ ಕದಂ, ಅಪ್ಪಾಸಾಬ ಖೋತ, ಆನಂದ ಚೌಹಾಣ, ಜ್ಯೋತಿಬಾ ಕಾಂಬಳೆ, ಸಾಗರ ಖೋತ, ನಾಗೇಶ ಉಗಳೆ, ಮಹಾಲಿಂಗ ಖೋತ, ಬಾಬಾಸಾಹೇಬ ಪಾಟೀಲ, ಪ್ರಥಮೇಶ ನೆಜೆ, ದೀಪಕ ಉಗಳೆ, ಅನಿಲ ಉಗಳೆ ಸೇರಿ 50ಕ್ಕೂ ಅಧಿಕ ಕಾರ್ಯಕರ್ತರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡರು. ಅವರನ್ನು ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆಯವರು ಬರಮಾಡಿಕೊಂಡರು.
ಗ್ರಾಪಂ ಮಾಜಿ ಸದಸ್ಯೆ ಸುಮಿತ್ರಾ ಉಗಳೆ ಮಾತನಾಡಿ, ತಾವು ಬಿಜೆಪಿಗೆ ಮರಳಿರುವುದು ಸಂತಸ ತಂದಿದ್ದು, ಪಕ್ಷದ ಬಲವೃದ್ಧಿಗಾಗಿ ಶ್ರಮಿಸುವುದಾಗಿ ತಿಳಿಸಿದರು.
ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಶರದ ಜಂಗಟೆ, ಶ್ರೀಕಾಂತ ಬನ್ನೆ, ಸಮಿತ ಸಾಸನೆ, ಬಾಳಸಾಹೇಬ ಕದಂ, ಪ್ರಕಾಶ ಶಿಂಧೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net