ಪ್ರತಿ ವರ್ಷ ಚಂದಗಡ ಮತ್ತು ದಾಂಡೇಲಿ ಕಾಳಿ ಅಭಯಾರಣ್ಯದಿಂದ ಖಾನಾಪುರ ತಾಲೂಕಿಗೆ ಆನೆಗಳ ಸಂಚಾರ ಸಾಮಾನ್ಯವಾಗಿರುತ್ತದೆ. ಈ ವೇಳೆ ಖಾನಾಪುರ ಭಾಗದಲ್ಲಿ ಆನೆಗಳು ಸಾವಿಗೀಡಾಗುತ್ತಿರುವುದು ಸಾಮಾನ್ಯ ಎಂಬಂತಾಗಿದೆ. 2007ರಲ್ಲಿ ಮೋದೆಕೊಪ್ಪ ಬಳಿ ಎರಡು ಆನೆ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದವು. 2009ರಲ್ಲಿ ನಾಗರಗಾಳಿ ಬಳಿ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಒಂದು ಆನೆ ಮರಿ, 2013ರಲ್ಲಿ ರೈಲಿಗೆ ಸಿಲುಕಿ ಒಂದು ಆನೆ ಸಾವಿಗೀಡಾಗಿತ್ತು. 2017ರಲ್ಲಿ ಅಶೋಕನಗರ ಬಳಿ ವಿದ್ಯುತ್ ತಂತಿ ಸ್ಪರ್ಶಿಸಿ ಆನೆ ಸಾವಿಗೀಡಾಗಿತ್ತು. 15 ದಿನಗಳಿಂದ ಖಾನಾಪುರ ತಾಲೂಕಿನ ದಕ್ಷಿಣ ಪಟ್ಟಿಯಲ್ಲಿರುವ ದಾಂಡೇಲಿ ಕಾಳಿ ಅಭಯಾರಣ್ಯದಿಂದ ಬಂದಿರುವ ಸುಮಾರು ಹದಿನೈದು ಆನೆಗಳ ಹಿಂಡು ಹತರವಾಡ ಅರಣ್ಯ ಗೋಧೋಳಿ ಪ್ರದೇಶದಲ್ಲಿ ಸಂಚರಿಸುತ್ತಿದೆ. ಈ ಹಿಂಡಿನಲ್ಲಿರುವ ಕೆಲವು ಆನೆಗಳು ಘೋಟಗಾಳಿ ಮತ್ತು ಸುಲೇಗಾಳಿ ಪ್ರದೇಶಗಳಲ್ಲಿ ಸಂಚರಿಸುತ್ತಿವೆ.