ದೇವಸ್ಥಾನಗಳು ಜನರನ್ನು ಒಗ್ಗೂಡಿಸುವ ಕೇಂದ್ರಗಳು

ಬೆಳಗಾವಿ ತಾಲೂಕಿನ ಕಂಗ್ರಾಳಿ ಬಿ.ಕೆ. ಗ್ರಾಮದ ಸಿದ್ದೇಶ್ವರ ಮಂದಿರದಲ್ಲಿ ಸೋಮವಾರ ಲಕ್ಷ್ಮೀ ಹೆಬ್ಬಾಳ್ಕರ ಪೂಜೆ ಸಲ್ಲಿಸಿದರು. ಉಮೇಶ ನಾಯಕ, ಲೋಹಿತ, ರಮೇಶ ವಡರಟ್ಟಿ, ಸಾಗರ ಪಮ್ಮಾರ, ಉಮೇಶ ಗದಗ ಇತರರಿದ್ದರು.
ಬೆಳಗಾವಿ ತಾಲೂಕಿನ ಕಂಗ್ರಾಳಿ ಬಿ.ಕೆ. ಗ್ರಾಮದ ಸಿದ್ದೇಶ್ವರ ಮಂದಿರದಲ್ಲಿ ಸೋಮವಾರ ಲಕ್ಷ್ಮೀ ಹೆಬ್ಬಾಳ್ಕರ ಪೂಜೆ ಸಲ್ಲಿಸಿದರು. ಉಮೇಶ ನಾಯಕ, ಲೋಹಿತ, ರಮೇಶ ವಡರಟ್ಟಿ, ಸಾಗರ ಪಮ್ಮಾರ, ಉಮೇಶ ಗದಗ ಇತರರಿದ್ದರು.
Published on
ಬೆಳಗಾವಿ : ಗ್ರಾಮೀಣ ಪ್ರದೇಶಗಳಲ್ಲಿ ಧಾರ್ಮಿಕ ಕೇಂದ್ರಗಳು ಕೇವಲ ಪೂಜಾ ಸ್ಥಳಗಳಾಗಿರದೆ, ಜನರನ್ನು ಒಗ್ಗೂಡಿಸುವ ಹಾಗೂ ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳಿಗೆ ವೇದಿಕೆಯಾಗಿವೆ. ಹೀಗಾಗಿ, ಪವಿತ್ರ ಧಾರ್ಮಿಕ ಸ್ಥಳಗಳ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡುವುದು ತಮ್ಮ ಕರ್ತವ್ಯವಾಗಿದೆ ಎಂದು ಮಾಜಿ ಸಚಿವೆ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ ಹೇಳಿದರು.
ಶ್ರಾವಣ ಮಾಸದ ಕೊನೇ ಸೋಮವಾರದ ಪ್ರಯುಕ್ತ ಕಂಗ್ರಾಳಿ ಬಿ.ಕೆ. ಗ್ರಾಮದ ಸಿದ್ದೇಶ್ವರ ಮಂದಿರದಲ್ಲಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಕಳಸ ಪೂಜೆಯಲ್ಲಿ ಭಾಗವಹಿಸಿದ ಅವರು, ನಾಡಿನ ಸಮಸ್ತ ಜನರ ಸುಖ, ಶಾಂತಿ, ಆರೋಗ್ಯ, ಸಮೃದ್ಧಿ ಹಾಗೂ ಸರ್ವತೋಮುಖ ಅಭಿವೃದ್ಧಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಇದೇ ವೇಳೆ ದೇವಸ್ಥಾನದ ನಿರ್ಮಾಣ ಹಾಗೂ ಜೀರ್ಣೋದ್ಧಾರ ಕಾಮಗಾರಿಗಳನ್ನು ವೀಕ್ಷಿಸಿ, ಮಂದಿರದ ಅಭಿವೃದ್ಧಿ ಹಾಗೂ ಜೀರ್ಣೋದ್ಧಾರಕ್ಕಾಗಿ ಸರ್ಕಾರದ ವತಿಯಿಂದ ರೂ.50 ಲಕ್ಷ ರೂ. ವಿಶೇಷ ಅನುದಾನವನ್ನು ಬಿಡುಗಡೆ ಮಾಡಿಸುವ ಭರವಸೆ ನೀಡಿದರು.
ಉಮೇಶ ನಾಯಕ, ಲೋಹಿತ, ರಮೇಶ ವಡರಟ್ಟಿ, ಸಾಗರ ಪಮ್ಮಾರ, ಉಮೇಶ ಗದಗ, ಚೇತನ, ಸಿದ್ದರಾಯಿ ಇತರರಿದ್ದರು.

ಬಸವೇರ್ಶವರ ದೇವಸ್ಥಾನದಲ್ಲಿ ಪೂಜೆ: ಎ.ಪಿ.ಎಂ.ಸಿ ರಸ್ತೆಯಲ್ಲಿನ ಬಸವೇಶ್ವರ ದೇವಸ್ಥಾನಕ್ಕೂ ಭೇಟಿ ನೀಡಿದ ಅವರು ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು. ಈ ವೇಳೆ ಬಸವೇಶ್ವರ ದೇವಸ್ಥಾನದ ಟ್ರಸ್ಟ್ ಕಮಿಟಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ದೇವಸ್ಥಾನದ ಅಭಿವೃದ್ಧಿ ಹಾಗೂ ಧಾರ್ಮಿಕ ಚಟುವಟಿಕೆಗಳ ಕುರಿತು ಟ್ರಸ್ಟ್ ಸದಸ್ಯರೊಂದಿಗೆ ಚರ್ಚಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net