ಮಿರಜ ಸ್ಪಂದನ ಹೃದಯಾಲಯದಲ್ಲಿ ಟಿಎವಿಐ ಚಿಕಿತ್ಸೆ ನೆರವೇರಿಸಿರುವ ವೈದ್ಯರ ತಂಡ. ಡಾ.ರಿಯಾಜ್ ಮುಜಾವರ್, ಡಾ.ಶಬಾನಾ ಮುಜಾವರ್, ಡಾ.ಅಮಿತ ಜೋಶಿ, ಡಾ.ಯೋಗೀಶ ಜಂಬಗೆ, ಡಾ.ಸಚಿನ ಗಾವಡೆ ಇತರರು ಇದ್ದರು.
ಕಾಗವಾಡ: ಮಿರಜನ ಸ್ಪಂದನ ಹೃದಯಾಲಯದಲ್ಲಿ ಮೊದಲ ಬಾರಿಗೆ ಹೃದಯದಲ್ಲಿನ ಮಹಾ ಅಪಧಮನಿಯ ಕವಾಟ ಬದಲಿಸುವ ಆಧುನಿಕ ಟಿಎವಿಐ ಚಿಕಿತ್ಸೆಯನ್ನು ೭೭ ವರ್ಷದ ರೋಗಿಗೆ ಯಶಸ್ವಿಯಾಗಿ ನಡೆಸಲಾಗಿದೆ.
ರೋಗಿಯ ಹೃದಯ ಕವಾಟಗಳ ಮೂಲಕ ರಕ್ತದ ಹರಿವಿನಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದ್ದು, ವೈದ್ಯರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಚಿಕಿತ್ಸೆ ನೇತೃತ್ವ ವಹಿಸಿದ್ದ ಡಾ.ರಿಯಾಜ್ ಮುಜಾವರ್ ಮಾತನಾಡಿ, ಟಿಎವಿಐ ಚಿಕಿತ್ಸೆಯಲ್ಲಿ ಎದೆಯನ್ನು ತೆರೆಯದೆ ಹೃದಯ ಕವಾಟಗಳಿಗೆ ಚಿಕಿತ್ಸೆ ನೀಡುವ ಹಾಗೂ ಹೃದಯದಲ್ಲಿನ ಕಿರಿದಾದ ಮಹಾ ಅಪಧಮನಿಯ ಕವಾಟವನ್ನು ರಕ್ತನಾಳದ ಮೂಲಕ ಬದಲಾಯಿಸುವ ಅತ್ಯಾಧುನಿಕ ವಿಧಾನವಾಗಿದೆ.
ಟಿಎವಿಐ ಕಾರ್ಯವಿಧಾನದಿಂದ ರೋಗಿಯ ಶ್ವಾಸನಾಳಕ್ಕೆ ಟ್ಯೂಬ್ ಸೇರಿಸದೆ, ಇಂಟ್ಯೂಬೇಶನ್ ಇಲ್ಲದೆ ಚಿಕಿತ್ಸೆ ಪೂರ್ಣಗೊಳಿಸಲಾಯಿತು ಎಂದು ತಿಳಿಸಿದರು.
ಡಾ.ಭರತ ಮೂಡಲಗಿ, ವೈದ್ಯಕೀಯ ತಜ್ಞ ಡಾ.ಪದ್ಮಾಕರ ಶಿಂಗಾಡೆ, ತೀವ್ರ ನಿಗಾ ತಜ್ಞ ಡಾ.ಎಚ್.ಎಂ.
ಇಸ್ಮಾಯಿಲ್, ಶ್ವಾಸಕೋಶ ಶಾಸ್ತ್ರಜ್ಞ ಡಾ.ಗೌರವ ಫಾಲೆ, ಡಾ.ಅದಿತಿ ಫಾಲೆ ಸೇರಿದಂತೆ ಎಲ್ಲ ಸಿಬ್ಬಂದಿ ಪರಿಶ್ರಮ ಅಪಾರವಾಗಿದೆ ಎಂದು ಹೇಳಿದರು.