ತಲ್ಲೂರ ರಾಯನಗೌಡ್ರ ಕೊಡುಗೆ ಅಪಾರ

ತಲ್ಲೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ರಾಯನಗೌಡ್ರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಶಾಸಕ ವಿಶ್ವಾಸ ವೈದ್ಯ ಅವರನ್ನು ಸನ್ಮಾನಿಸಲಾಯಿತು. ಮುರಘೇಂದ್ರ ಸ್ವಾಮೀಜಿ, ದೀಪಕ ಸ್ವಾಮಿ, ಶಂಕರಗೌಡ ಪಾಟೀಲ, ಈರಣ್ಣ ಹುದ್ದಾರ, ಮುತ್ತನಗೌಡ ನಾಯ್ಕರ, ಬಸವರಾಜ ಬಡಿಗೇರ, ಶಂಕರ ಬಡಿಗೇರ, ಬಸವರಾಜ ಪೂಜೇರ ಇದ್ದರು.

Published on
ಗ್ರಾಮದಲ್ಲಿ ರಾಯನಗೌಡರ ವಂಶಸ್ಥರಿಂದ 2ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಪುತ್ಥಳಿ ಹಾಗೂ ಸಭಾಂಗಣವನ್ನು ಬುಧವಾರ ಉದ್ಘಾಟಿಸಿ ಮಾತನಾಡಿ, ಕಿತ್ತೂರಿನ ಇತಿಹಾಸವನ್ನು ಸಂರಕ್ಷಿಸಲು ಇಂಗ್ಲೆಂಡ್‌ವರೆಗೆ ತೆರಳಿ ದಾಖಲೆ ಸಂಗ್ರಹಿಸಿದ ರಾಯನಗೌಡ್ರ ಕಾರ್ಯ ದೇಶ ಭಕ್ತಿಯ ಅಪೂರ್ವ ಉದಾಹರಣೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುರಗೋಡ ಮಹಾಂತ ದುರದುಂಡೇಶ್ವರ ಮಠದ ನೀಲಕಂಠ ಸ್ವಾಮೀಜಿ, ಮುನವಳ್ಳಿ ಸೋಮಶೇಖರ ಮಠದ ಮುರುಘೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.
ಮಮದಾಪುರದ ಮೌನ ಮಲ್ಲಿಕಾರ್ಜುನ ಸ್ವಾಮೀಜಿ, ತೊರಗಲ್ಲಮಠದ ದೀಪಕ ಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಪ್ರಸನ್ನ ಶಾಸಿ, ತಹಸೀಲ್ದಾರ್ ಎಂ.ವಿ.ಗುಂಡಪ್ಪಗೋಳ, ಗ್ರಾಪಂ ಮಾಜಿ ಉಪಾಧ್ಯಕ್ಷ ಬಾಬುಗೌಡ ಅಣ್ಣಿಗೇರಿ, ಪಿಡಿಒ ವಿಜಯಕುಮಾರ ಅಂಗಡಿ, ಮುಖಂಡ ಶಂಕರಗೌಡ ಪಾಟೀಲ, ಈರಣ್ಣ ಹುದ್ದಾರ, ಬಸವರಾಜ ಬಡಿಗೇರ, ಬಸವರಾಜ ಪೂಜೇರ, ಶಂಕರ ಬಡಿಗೇರ, ಯು.ಡಿ.ತಲ್ಲೂರ, ಮುತ್ತನಗೌಡ ನಾಯ್ಕರ, ಎಂ.ವಿ.ಉಪ್ಪಿನ, ರವಿ ಜೋಲಾಪುರಿ, ಶಶಿಧರ ತಳವಾರ, ಸುಭಾನಿ ಕುದರಿ ಇತರರು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net