ಸಿಇಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಶಿವಾನಂದ ಕಮತೆ, ಪಿ.ಬಿ.ಅವಲಕ್ಕಿ ಇತರರಿದ್ದರು.
Published on:
Copied
Follow Us
ಉಳ್ಳಾಗಡ್ಡಿ-ಖಾನಾಪುರ: ವಿದ್ಯಾರ್ಥಿಗಳು ಏಕಾಗ್ರತೆ ಹಾಗೂ ಸಂಯಮದಿಂದ ಓದಿದಾಗ ಯಶಸ್ಸು ಸಿಗುತ್ತದೆ ಎಂದು ಚಾರ್ಟರ್ಡ್ ಅಕೌಂಟೆಂಟ್ ಶಿವಾನಂದ ಕಮತೆ ಹೇಳಿದರು.
ಯಮಕನಮರಡಿಯ ಸಿಇಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮ ಉದ್ಘಾಟನೆ ಹಾಗೂ ಬಿಕಾಂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ವಾಣಿಜ್ಯ ವಿಷಯಗಳ ಕುರಿತು ಮಾಹಿತಿ ನೀಡಿದರು.
ಪ್ರಾ.ಪಿ.ಬಿ.ಅವಲಕ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಧನೆಗೈದ ವಿದ್ಯಾರ್ಥಿಗಳಾದ ಶ್ವೇತಾ ಹಂಚಿನಮನಿ, ಪ್ರೀತಿ ಪಾಸಪ್ಪಗೋಳ, ಸುಮತಿ ಬಿಸಿರೊಟ್ಟಿ ಮತ್ತು ಸ್ನೇಹಾ ಸೂಜಿ ಅವರನ್ನು ಸನ್ಮಾನಿಸಲಾಯಿತು.