ವಿದ್ಯಾರ್ಥಿಗಳಿಗೆ ಡಿಜಿಟಲ್ ಕೌಶಲ ಅಗತ್ಯ

ಚಿಕ್ಕೋಡಿ ತಾಲೂಕಿನ ಖಡಕಲಾಟ ಶಾಲೆಯಲ್ಲಿ ಗುರುವಾರ ರಾಣಿ ಚನ್ನಮ್ಮ ಮಹಿಳಾ ಸಹಕಾರ ಬ್ಯಾಂಕಿನ 30ನೇ ವರ್ಷಾಚರಣೆ ಪ್ರಯುಕ್ತ ಏರ್ಪಡಿಸಿದ್ದ ಶೈಕ್ಷಣಿಕ ಹಾಗೂ ಗಣಕಯಂತ್ರ ಸಾಮಗ್ರಿ ದೇಣಿಗೆ ವಿತರಣೆ ಸಮಾರಂಭದಲ್ಲಿ ಡಾ.ಪ್ರೀತಿ ದೊಡವಾಡ, ರೂಪಾ ಮುನವಳ್ಳಿ, ಅರುಂಧತಿ ಪಟ್ಟೇದ, ಗೌರಿ ಮಾಂಜರೇಕರ, ಕೀರ್ತಿ ಮೆಟಗುಡ್ಡ, ಬೀನಾ ಆಚಾರ್, ಸೀಮಾ ಬಾಗೇವಾಡಿ, ಡಾ.ಸುವರ್ಣಲತಾ ಬನ್ಸೋಡೆ ಇತರರಿದ್ದರು.
ಚಿಕ್ಕೋಡಿ ತಾಲೂಕಿನ ಖಡಕಲಾಟ ಶಾಲೆಯಲ್ಲಿ ಗುರುವಾರ ರಾಣಿ ಚನ್ನಮ್ಮ ಮಹಿಳಾ ಸಹಕಾರ ಬ್ಯಾಂಕಿನ 30ನೇ ವರ್ಷಾಚರಣೆ ಪ್ರಯುಕ್ತ ಏರ್ಪಡಿಸಿದ್ದ ಶೈಕ್ಷಣಿಕ ಹಾಗೂ ಗಣಕಯಂತ್ರ ಸಾಮಗ್ರಿ ದೇಣಿಗೆ ವಿತರಣೆ ಸಮಾರಂಭದಲ್ಲಿ ಡಾ.ಪ್ರೀತಿ ದೊಡವಾಡ, ರೂಪಾ ಮುನವಳ್ಳಿ, ಅರುಂಧತಿ ಪಟ್ಟೇದ, ಗೌರಿ ಮಾಂಜರೇಕರ, ಕೀರ್ತಿ ಮೆಟಗುಡ್ಡ, ಬೀನಾ ಆಚಾರ್, ಸೀಮಾ ಬಾಗೇವಾಡಿ, ಡಾ.ಸುವರ್ಣಲತಾ ಬನ್ಸೋಡೆ ಇತರರಿದ್ದರು.
Published on

ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಸಾಂಪ್ರದಾಯಿಕ ಶಿಕ್ಷಣದ ಜತೆಗೆ ಡಿಜಿಟಲ್ ಕೌಶಲಗಳನ್ನು ರೂಢಿಸಿಕೊಳ್ಳುವ ಅಗತ್ಯವಿದೆ. ಇದರಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ರಾಣಿ ಚನ್ನಮ್ಮ ಮಹಿಳಾ ಸಹಕಾರ ಬ್ಯಾಂಕ್ ಅಧ್ಯಕ್ಷೆ ಡಾ.ಪ್ರೀತಿ ದೊಡವಾಡ ಹೇಳಿದರು.

ರಾಣಿ ಚನ್ನಮ್ಮ ಮಹಿಳಾ ಸಹಕಾರ ಬ್ಯಾಂಕಿನ 30ನೇ ವರ್ಷಾಚರಣೆ ಸ್ಮರಣೆಗಾಗಿ ಗ್ರಾಮೀಣ ಭಾಗದಲ್ಲಿ ಡಿಜಿಟಲ್ ಹಾಗೂ ಶೈಕ್ಷಣಿಕ ಸಾಕ್ಷರತೆ ಉತ್ತೇಜಿಸುವ ಸಾಮಾಜಿಕ ಜವಾಬ್ದಾರಿ ಭಾಗವಾಗಿ ಚಿಕ್ಕೋಡಿ ತಾಲೂಕಿನ ಖಡಕಲಾಟದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ ಗುರುವಾರ ಶೈಕ್ಷಣಿಕ ಸಾಮಗ್ರಿಗಳು ಹಾಗೂ ಗಣಕಯಂತ್ರ
ದೇಣಿಗೆ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಜಯಶ್ರೀ ಪಾಟೀಲ ಮಾತನಾಡಿ, ಇಂತಹ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಉಪಕ್ರಮಗಳು ಗ್ರಾಮೀಣ ಶಿಕ್ಷಣ ಮಟ್ಟವನ್ನು ಹೆಚ್ಚಿಸಲು ಅತ್ಯಂತ ಸಹಕಾರಿ ಎಂದು ಬ್ಯಾಂಕ್‌ಗೆ ಕೃತಜ್ಞತೆ ಸಲ್ಲಿಸಿದರು.
ಶಾಲೆಗೆ 4 ಡೆಸ್ಕ್‌ಟಾಪ್ ಕಂಪ್ಯೂಟರ್, ‘ವಿದ್ಯಾ ಆಸನ’ ಶೈಕ್ಷಣಿಕ ಕಿಟ್‌ಗಳು, ಶಾಲಾ ಬ್ಯಾಗ್, ನೋಟ್‌ಬುಕ್, ಡ್ರಾಯಿಂಗ್ ಬುಕ್, ಕಲರ್ ಹಾಗೂ ಪೆನ್ಸಿಲ್ ಬಾಕ್ಸ್‌ಗಳನ್ನು ಉಡುಗೊರೆಯಾಗಿ ನೀಡಲಾಯಿತು.
ಗ್ರಾಮೀಣ ಶಿಕ್ಷಣಕ್ಕೆ ಬ್ಯಾಂಕ್ ನೀಡಿದ ಈ ಕೊಡುಗೆ ಶ್ಲಾಘಿಸಿ, ಶಾಲಾ ಆಡಳಿತ ಮಂಡಳಿಯವರು, ಬ್ಯಾಂಕ್ ಅಧ್ಯಕ್ಷೆ ಡಾ.ಪ್ರೀತಿ ದೊಡವಾಡ, ಉಪಾಧ್ಯಕ್ಷೆ ರೂಪಾ ಮುನವಳ್ಳಿ, ನಿರ್ದೇಶಕರಾದ ಅರುಂಧತಿ ಪಟ್ಟೇದ, ಕೀರ್ತಿ ಮೆಟಗುಡ್ಡ, ಬೀನಾ ಆಚಾರ್, ಸೀಮಾ ಬಾಗೇವಾಡಿ, ಡಾ.ಸುವರ್ಣಲತಾ ಬನ್ಸೋಡೆ ಅವರನ್ನು ಸನ್ಮಾನಿಸಿದರು.
ವಿದ್ಯಾರ್ಥಿಗಳು ಕಂಪ್ಯೂಟರ್‌ಗಳನ್ನು ಶ್ರದ್ಧೆಯಿಂದ ಬಳಸಿ ಜವಾಬ್ದಾರಿಯುತ ಪ್ರಜೆಗಳಾಗಿ ಬೆಳೆಯುತ್ತೇವೆಂದು ಪ್ರತಿಜ್ಞೆ ಮಾಡಿದರು. ಪಂಖ್ ಫೌಂಡೇಷನ್ ಗೌರಿ ಮಾಂಜರೇಕರ, ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು, ಪಾಲಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಿಕ್ಷಕಿ ವಿಜಯಮಾಲಾ ಕುಂಬಾರ ನಿರೂಪಿಸಿ, ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net