ಭಾರತೀಯ ಸಂಸ್ಕೃತಿ ಉಳಿಸಲು ಶ್ರಮಿಸಿ

ಹುಕ್ಕೇರಿ ಹಿರೇಮಠದಲ್ಲಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ ಅವರನ್ನು ಚಂದ್ರಶೇಖರ ಶಿವಾಚಾರ್ಯರು ಸನ್ಮಾನಿಸಿದರು. ಅಶೋಕ ಪಾಟೀಲ, ಪ್ರಜ್ವಲ ನಿಲಜಗಿ ಇದ್ದರು.
ಹುಕ್ಕೇರಿ ಹಿರೇಮಠದಲ್ಲಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ ಅವರನ್ನು ಚಂದ್ರಶೇಖರ ಶಿವಾಚಾರ್ಯರು ಸನ್ಮಾನಿಸಿದರು. ಅಶೋಕ ಪಾಟೀಲ, ಪ್ರಜ್ವಲ ನಿಲಜಗಿ ಇದ್ದರು.
Published on
ಹುಕ್ಕೇರಿ: ದೀಪ ಆರಿಸಿ, ಕೇಕ್ ಕಟ್ ಮಾಡುವುದು ವಿದೇಶಿಯರ ಸಂಸ್ಕೃತಿ. ದೇವರಿಗೆ ನಮಿಸಿ, ಗುರು ಹಿರಿಯರ ಆಶೀರ್ವಾದ ಪಡೆಯುವುದು ನಮ್ಮ ದೇಶದ ಸಂಸ್ಕೃತಿ ಎಂದು ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಹೇಳಿದರು.
ಇಲ್ಲಿನ ಗುರುಶಾಂತೇಶ್ವರ ಹಿರೇಮಠದಲ್ಲಿ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ ಅವರನ್ನು ಮಂಗಳವಾರ ಸನ್ಮಾನಿಸಿ ಮಾತನಾಡಿದರು. ಮಹಾವೀರ ನಿಲಜಗಿ ಅವರು ದೇವರಿಗೆ 55 ದೀಪ ಬೆಳಗಿಸುವ ಮೂಲಕ 55ನೇ ಜನ್ಮದಿನ ಸಂಭ್ರಮ ಆಚರಿಸಿಕೊಳ್ಳುತ್ತಿರುವುದು ವಿಶೇಷ. ನಮ್ಮ ಸಂಸ್ಕಾರ, ಸಂಸ್ಕೃತಿ ಮರೆಯಬಾರದು. ಸಂಸ್ಕಾರಕ್ಕೆ ಮೊದಲು ಆದ್ಯತೆ ನೀಡುತ್ತಿರುವ ಅವರಿಗೆ ಗುರುಶಾಂತೇಶ್ವರ ಆಯುರಾರೋಗ್ಯ ನೀಡಲಿ ಎಂದರು.
ರೀಡ್ಸ್ ಸಂಸ್ಥೆ ಅಧ್ಯಕ್ಷ ಅಶೋಕ ಪಾಟೀಲ, ಮಹಾವೀರ ಸಮೂಹ ಸಂಸ್ಥೆಯ ಉಪಾಧ್ಯಕ್ಷ ಪ್ರಜ್ವಲ ನಿಲಜಗಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜೇಂದ್ರ ಪಾಟೀಲ, ಶಾಖಾಧಿಕಾರಿ ಸಂತೋಷ ರಜಪೂತ, ಪ್ರವೀಣ ಪಾಟೀಲ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net