ಅಥಣಿ ಮತ್ತು ಕಾಗವಾಡ ತಾಲೂಕಿನಲ್ಲಿ ಇರುವ ಒಟ್ಟು 18 ವಸತಿನಿಲಯಗಳಲ್ಲಿ 1,150 ವಿದ್ಯಾರ್ಥಿಗಳು ಇದ್ದಾರೆ. 12 ಕೋಟಿ ರೂ. ವೆಚ್ಚದಲ್ಲಿ ವಸತಿನಿಲಯದ ಕಟ್ಟಡ ನವೀಕರಿಸಲಾಗಿದೆ. ಹಾಸ್ಟೆಲ್‌ಶುಚಿಯಾಗಿ ಇಟ್ಟುಕೊಳ್ಳಬೇಕು. ಸಮಯಕ್ಕೆ ಸರಿಯಾಗಿ ಹಾಜರಾಗಿ ಕೆಲಸ ನಿರ್ವಹಿಸಬೇಕು. ಗೈರುಹಾಜರಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ವಸತಿನಿಲಯ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ವಸತಿ ನಿಲಯದ ಅಧೀಕ್ಷಕ ಮಹೇಶ ಗಡಿವಾರ ಮತ್ತು ಸಿಬ್ಬಂದಿ ಇದ್ದರು.