ಸಾಮಾಜಿಕ ಜಾಗೃತಿಗೆ ಶ್ರಮಿಸುತ್ತಿರುವ ಶ್ರೀಮಠ

ಕೊಳವಿ ಗ್ರಾಮದ ಗುರುಲಿಂಗ ಜಂಗಮ ಮಠದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಯುಗಾದಿ ಮಹೋತ್ಸವ, ಶರಣ ಸಂಸ್ಕೃತಿ ಹಾಗೂ ಪ್ರವಚನ ಮಂಗಲೋತ್ಸವದ ಧರ್ಮಸಭೆಯಲ್ಲಿ ಪ್ರವಚನಕಾರ ಸದಾನಂದಶಾಸಿ ಅವರನ್ನು ಸನ್ಮಾನಿಸಲಾಯಿತು. ಸಿದ್ಧಲಿಂಗ ಸ್ವಾಮೀಜಿ, ಸಂಗಯ್ಯ ಸ್ವಾಮೀಜಿ, ಬಸವರಾಜ ಸ್ವಾಮೀಜಿ ಇತರರಿದ್ದರು.
ಕೊಳವಿ ಗ್ರಾಮದ ಗುರುಲಿಂಗ ಜಂಗಮ ಮಠದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಯುಗಾದಿ ಮಹೋತ್ಸವ, ಶರಣ ಸಂಸ್ಕೃತಿ ಹಾಗೂ ಪ್ರವಚನ ಮಂಗಲೋತ್ಸವದ ಧರ್ಮಸಭೆಯಲ್ಲಿ ಪ್ರವಚನಕಾರ ಸದಾನಂದಶಾಸಿ ಅವರನ್ನು ಸನ್ಮಾನಿಸಲಾಯಿತು. ಸಿದ್ಧಲಿಂಗ ಸ್ವಾಮೀಜಿ, ಸಂಗಯ್ಯ ಸ್ವಾಮೀಜಿ, ಬಸವರಾಜ ಸ್ವಾಮೀಜಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಿದ್ಧಲಿಂಗ ಸ್ವಾಮೀಜಿ ಅಭಿನುಡಿ
  • ಕೊಳವಿಯಲ್ಲಿ ಶರಣ ಸಂಸ್ಕೃತಿ, ಪ್ರವಚನ ಮಂಗಲೋತ್ಸವ
ಮಮದಾಪುರ: ಕತ್ತಲದಿಂದ ಅಧರ್ಮ ಜ್ಯೋತಿ ಮಾಯವಾಗಿ ಬೆಳಕಿನಡೆಗೆ ಧರ್ಮದ ಜ್ಯೋತಿ ನಿರಂತರವಾಗಿ ಬೆಳಗಲಿ ಎಂದು ನದಿ ಇಂಗಳಗಾಂವನ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ಗೋಕಾಕ ತಾಲೂಕಿನ ಕೊಳವಿ ಗ್ರಾಮದ ಗುರುಲಿಂಗ ಜಂಗಮ ಮಠದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಯುಗಾದಿ ಮಹೋತ್ಸವ, ಶರಣ ಸಂಸ್ಕೃತಿ ಹಾಗೂ ಪ್ರವಚನ ಮಂಗಲೋತ್ಸವದ ಧರ್ಮಸಭೆಯಲ್ಲಿ ಮಾತನಾಡಿದರು.
ಮುರುಘೇಂದ್ರ ಶಿವಯೋಗಿಗಳು ಅಥಣಿಯಿಂದ ಅಂಕಲಗಿ ಅಡವಿಸಿದ್ದೇಶ್ವರ ಮಠದವರೆಗೆ ಪಾದಯಾತ್ರೆ ಮೂಲಕ ಸಂಚರಿಸುವ ಸಂದರ್ಭದಲ್ಲಿ ತೆಪ್ಪೋತ್ಸವ ನೆರವೇರಿಸಿದ ಕೊಳವಿ ಗ್ರಾಮದ ಗುರುಲಿಂಗ ಜಂಗಮ ಮಠದಲ್ಲಿ
ಇಂದಿಗೂ ತೆಪ್ಪೋತ್ಸವ ನಡೆಸಲಾಗುತ್ತಿದೆ. ಸಾಮಾಜಿಕ ಜಾಗೃತಿಗೆ ಶ್ರಮಿಸುತ್ತಿರುವ ಶ್ರೀಮಠ ಹಾಗೂ ಶ್ರೀಗಳ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.
ಹೊಸ ಯರಗುದ್ರಿ ಜಂಗಮ ಮಠದ ಸಂಗಮೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ, ರೈತರು ರಸಾಯನಿಕ ಆಹಾರ ಬೆಳೆ ಪದ್ಧತಿ ತೊರೆದು, ಸಾವಯವ ಕೃಷಿ ಪದ್ಧತಿ ಅನುಸರಿಸುವ ಮೂಲಕ ವಿಷ ಮುಕ್ತ ಆಹಾರ ಬೆಳೆ ಬೆಳೆಯಬೇಕು. ಇದರಿಂದ ಆರ್ಥಿಕ ಸಬಲತೆಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಗೋಕಾಕ ಶೂನ್ಯ ಸಂಪಾದನ ಮಠದ ಬಸಪ್ರಭು ದೇವರು, ಕಪರಟ್ಟಿಯ ಬಸವರಾಜ ಸ್ವಾಮೀಜಿ, ಜಂಗಮಮಠದ ಸಂಗಯ್ಯ ಸ್ವಾಮೀಜಿ, ಬೆಣಚಿನಮರಡಿಯ ಶಿವಾನಂದ ಹಿರೇಮಠ ಆಶೀರ್ವಚನ ನೀಡಿದರು.
ಪ್ರವಚನಕಾರ ಸದಾನಂದಶಾಸಿ, ದಾನಿಗಳನ್ನು ಸನ್ಮಾನಿಸಲಾಯಿತು. ಕೆಂಪಣ್ಣ ಯರಗಟ್ಟಿ, ಬಸವರಾಜ ಬೆಟಗೇರಿ, ಸಂಜು ಹಿರಟ್ಟಿ, ಬಾಳಯ್ಯ ಪೂಜೇರಿ, ಆನಂದ ಹಟ್ಟಿಗೌಡ್ರ, ಬಾಳೇಶ ಮಾರಿಹಾಳ, ಮಲ್ಲಪ್ಪ ಹಟ್ಟಿಗೌಡ್ರ, ಶಿವು ಅಂಗಡಿ, ರಾಮಗೌಡ ಪಾಟೀಲ, ಮಹಾದೇವ ಹಟ್ಟಿಗೌಡ್ರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net