ಅಥಣಿ ಮಠಗಳಲ್ಲಿ ಬಸವಾದಿ ಶಿವಶರಣರ ತತ್ತ್ವ ಪ್ರಸಾರ

ಅಥಣಿ ಮೋಟಗಿಮಠದ ಬಸವ ಸಂಸ್ಕೃತಿ ಮೇಳದಲ್ಲಿ ಶಿಕ್ಷಕ ವೀರಣ್ಣ ಮಡಿವಾಳ ಅವರಿಗೆ ಅಥಣೀಶ ಅಂಕಿತ ಪುಸ್ತಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಗುರುಮಹಾಂತ ಸ್ವಾಮೀಜಿ, ಪ್ರಭುಚನ್ನಬಸವ ಸ್ವಾಮೀಜಿ, ಬಿ.ಎಲ್.ಪಾಟಿಲ ಇತರರಿದ್ದರು.
ಅಥಣಿ ಮೋಟಗಿಮಠದ ಬಸವ ಸಂಸ್ಕೃತಿ ಮೇಳದಲ್ಲಿ ಶಿಕ್ಷಕ ವೀರಣ್ಣ ಮಡಿವಾಳ ಅವರಿಗೆ ಅಥಣೀಶ ಅಂಕಿತ ಪುಸ್ತಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಗುರುಮಹಾಂತ ಸ್ವಾಮೀಜಿ, ಪ್ರಭುಚನ್ನಬಸವ ಸ್ವಾಮೀಜಿ, ಬಿ.ಎಲ್.ಪಾಟಿಲ ಇತರರಿದ್ದರು.
Published on
ಅಥಣಿ: ಪಟ್ಟಣದಲ್ಲಿರುವ ಎಲ್ಲ ಮಠಗಳು ನಿರಂತರವಾಗಿ ಬಸವಾದಿ ಶಿವಶರಣರ ತತ್ತ್ವ ಪ್ರಸಾರದಲ್ಲಿ ತೊಡಗಿರುವುದರಿಂದ ಅಥಣಿ ಅಧ್ಯಾತ್ಮದ ತವರೂರಾಗಿದೆ ಎಂದು ಇಳಕಲ್ಲ ವಿಜಯಮಹಾಂತೇಶ್ವರ ಸಂಸ್ಥಾನಮಠದ ಗುರುಮಹಾಂತ ಸ್ವಾಮೀಜಿ ಹೇಳಿದರು.
ಸ್ಥಳೀಯ ಮೋಟಗಿಮಠದ ಬಸವ ಸಂಸ್ಕೃತಿ ಮೇಳ-2026 ಗಡಿನಾಡ ನುಡಿಹಬ್ಬ ಮತ್ತು ಮೋಟಗಿಮಠದ ಪೂಜ್ಯರು ರಚಿಸಿದ ಅಥಣೀಶ ಅಂಕಿತ ಪುಸ್ತಕ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು.
ಸಾಹಿತಿ ವೀರಣ್ಣ ಮಡಿವಾಳ ಮಾತನಾಡಿ, ಪ್ರಾಥಮಿಕ ಶಾಲೆಗಳಿಂದ ವಚನ ಚಳವಳಿ ಆರಂಭಿಸುವ ಅನಿವಾರ್ಯತೆ ಇದೆ. ಬಸವಾದಿ ಶಿವಶರಣರ ವಚನಗಳು ಬದುಕಿಗೆ ದಾರಿದೀಪವಾಗಿದೆ. ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ ಬಿತ್ತುವಲ್ಲಿ ವಚನಗಳು ಪ್ರೇರಣೆಯಾಗಿವೆ ಎಂದರು.
ವಿಮೋಚನಾ ಸಂಘದ ಅಧ್ಯಕ್ಷ ಬಿ.ಎಲ್. ಪಾಟೀಲ ಮಾತನಾಡಿ, ಪೂಜ್ಯರು ಬಸವ ಸಂಸ್ಕೃತಿ ನಾಡಿಗೆ ಪ್ರಸಾರ ಮಾಡುವ ಜತೆಗೆ ಗಡಿಯಲ್ಲಿ ಕನ್ನಡವನ್ನು ಗಟ್ಟಿಯಾಗಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ, ಮುದಗಲ್ಲದ ಮಹಾಂತ ಸ್ವಾಮೀಜಿ ಮಾತನಾಡಿದರು. ಸಾಹಿತಿ ವೀರಣ್ಣ ಮಡಿವಾಳ ಅವರಿಗೆ ಅಥಣೀಶ ಅಂಕಿತ ಪುಸ್ತಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾಧಕರಾದ ಬಸನಗೌಡ ಹರನಾಳ, ಕಲ್ಲಪ್ಪ ಮಗೆಣ್ಣವರ, ಭೀಮು ಬಡಿಗೇರ, ಡಾ.ಎಸ್.ಎ.ಕುಲ್ಲೊಳ್ಳಿ, ದಿಲೀಪ ಕಾಂಬಳೆ ಇತರರನ್ನು ಸನ್ಮಾನಿಸಲಾಯಿತು. ಬಸವಾನಂದ ಸ್ವಾಮೀಜಿ, ವೀರೇಶ ವಾಲಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net