ಕ್ರೀಡೆ ಜೀವನದ ಅವಿಭಾಜ್ಯ ಅಂಗ: ಡಾ.ರಾಮರಾವ್

ಬೆಳಗಾವಿ ನಗರದ ಲಿಂಗರಾಜ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕ್ರೀಡಾಕೂಟ ಕಾರ್ಯಕ್ರಮದಲ್ಲಿ   ಡಾ.ಸಿ.ರಾಮರಾವ್​, ಎಚ್​.ಜಿ. ವೀರಗಂಟಿ, ಎಸ್​.ಎಸ್​.ಹಲವಾಯಿ, ಎ.ಜಿ.ಬಾಯನ್ನವರ, ಸಿ.ಎಂ.ಪಾಗದ, ಪಿ.ಆರ್​.ಸುಣಗಾರ ಭಾಗವಹಿಸಿದ್ದರು.
ಬೆಳಗಾವಿ ನಗರದ ಲಿಂಗರಾಜ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಡಾ.ಸಿ.ರಾಮರಾವ್​, ಎಚ್​.ಜಿ. ವೀರಗಂಟಿ, ಎಸ್​.ಎಸ್​.ಹಲವಾಯಿ, ಎ.ಜಿ.ಬಾಯನ್ನವರ, ಸಿ.ಎಂ.ಪಾಗದ, ಪಿ.ಆರ್​.ಸುಣಗಾರ ಭಾಗವಹಿಸಿದ್ದರು.
Published on
ಬೆಳಗಾವಿ: ಕ್ರೀಡೆ ವಿದ್ಯಾರ್ಥಿಗಳ ಜೀವನದ ಅವಿಭಾಜ್ಯ ಅಂಗವಾಗಿದೆ. ಪ್ರತಿಯೊಬ್ಬರೂ ಉತ್ಸಾಹದಿಂದ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಲಿಂಗರಾಜ ಮಹಾವಿದ್ಯಾಲಯದ ದೈಹಿಕ ಶಿಣ ನಿರ್ದೇಶಕ ಡಾ.ಸಿ.ರಾಮರಾವ್​ ಹೇಳಿದರು.
ನಗರದ ಕೆಎಲ್​ಇ ಸಂಸ್ಥೆಯ ಜಿ.ಎ.ಪದವಿ ಪೂರ್ವ ಮಹಾವಿದ್ಯಾಲಯದ ಪ್ರೌಢಶಾಲಾ ವಿಭಾಗದ ಪ್ರಸಕ್ತ ಸಾಲಿನ ವಾರ್ಷಿಕ ಕ್ರೀಡಾಕೂಟಕ್ಕೆ ಶುಕ್ರವಾರ ಚಾಲನೆ ನೀಡಿ, ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ಕ್ರಿಯಾಶೀಲರಾಗಿ ಭಾಗವಹಿಸುವ ಮೂಲಕ ತಮ್ಮಲ್ಲಿರುವ ಸುಪ್ತ ಪ್ರತಿಭೆ ಹೊರತರಬೇಕು ಎಂದರು.
ಉಪಪ್ರಾಚಾರ್ಯ ಸಿ.ಪಿ.ದೇವಋಷಿ ಮಾತನಾಡಿ, ಕ್ರೀಡೆಗಳಲ್ಲಿ ಭಾಗವಹಿಸುವುದು ಅತ್ಯಂತ ಮುಖ್ಯ. ಇದರಲ್ಲಿ ಪ್ರಥಮ, ದ್ವೀತಿಯ, ತೃತೀಯ ಬರಬಹುದು. ಯಾರು ನಿರಾಶೆ ಪಡಬೇಕಾಗಿಲ್ಲ. ಕ್ರೀಡೆಗಳಲ್ಲಿ ಪರಿಶ್ರಮ ಮತ್ತು ತಾಳ್ಮೆ ಅತ್ಯಂತ ಪ್ರಮುಖವಾಗಿರುತ್ತದೆ ಎಂದರು. ಕ್ರೀಡಾ ವಿಭಾಗದ ಮುಖ್ಯಸ್ಥ ಎಚ್​.ಜಿ.ವೀರಗಂಟಿ, ಎಸ್​.ಎಸ್​.ಹಲವಾಯಿ, ಎ.ಜಿ.ಬಾಯನ್ನವರ, ಸಿ.ಎಂ.ಪಾಗದ, ಪಿ.ಆರ್​.ಸುಣಗಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net