ಸುಳೇಬಾವಿ: ಅನುಮತಿ ಇಲ್ಲದೆ ಸುಳೇಬಾವಿ ಗ್ರಾಮದ ಮದುವೆ ಕಾರ್ಯಕ್ರಮದಲ್ಲಿ ಸೌಂಡ್ ಸಿಸ್ಟಂ ಹಚ್ಚಿ ಸಾರ್ವಜನಿಕರಿಗೆ ಮತ್ತು ವಾಹನಗಳ ಓಡಾಟಕ್ಕೆ ತೊಂದರೆ ಕೊಟ್ಟ ಆರೋಪದಲ್ಲಿ ಸುರೇಶ ಬಳಗನ್ನವರ ಮತ್ತು ವೀರಭದ್ರ ಯರಗುದ್ದಿ ವಿರುದ್ಧ ಮಾರಿಹಾಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸೌಂಡ್ ಬೇಸ್, ಸೌಂಡ್ ಟಾಪ್, ಬಾಕ್ಸ್, ಜನರೇಟರ್, ಟ್ರ್ಯಾಕ್ಟರ್ ಟ್ರಾಲಿ ಸೇರಿದಂತೆ ಒಟ್ಟು
52 ಸಾವಿರ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.