ಸಿದ್ಧಾರೂಢ ಮಠ ಲೋಕಾರ್ಪಣೆ ನಾಳೆಯಿಂದ

ಸಿದ್ಧಾರೂಢರು
ಸಿದ್ಧಾರೂಢರು
Published on
ಏ.23ರಂದು ಬೆಳಗ್ಗೆ ಧರ್ಮ ಧ್ವಜಾರೋಹಣ, ವಾಸ್ತು ಶಾಂತಿ ಪೂಜೆ ಹಾಗೂ ಮಠದ ಲೋಕಾರ್ಪಣೆ ಜರುಗಲಿದೆ. ಸಂಜೆ 6 ಗಂಟೆಗೆ ಪ್ರವಚನ ಕಾರ್ಯಕ್ರಮ ನಡೆಯಲಿದೆ. ಏ.24ರಂದು ಬೆಳಗ್ಗೆ 7ಕ್ಕೆ ಕುಂಭದೊಂದಿಗೆ ಸಿದ್ಧಾರೂಢರ ಮೂರ್ತಿ ಮೆರವಣಿಗೆ ಹಾಗೂ ಸತ್ಕಾರ ಸಮಾರಂಭ ನಡೆಯಲಿದೆ. ಸಂಜೆ 7ಕ್ಕೆ ಧರ್ಮಸಭೆ ನಡೆಯಲಿದೆ. ಏ.25ರಂದು ಬೆಳಗ್ಗೆ 8ಕ್ಕೆ ಪ್ರಾಣ ಪ್ರತಿಷ್ಠಾಪನೆ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ.
ರಾಣಿ ಶುಗರ್ಸ್ ಮಾಜಿ ಉಪಾಧ್ಯಕ್ಷ ವೀರೇಶ ಕಂಬಳಿ ಲೋಕಾರ್ಪಣೆಗೊಳಿಸುವರು. ರಾಮಚಂದ್ರ ಸರದಾರ ಹಾಗೂ ಗ್ರಾಮಸ್ಥರು ಕಲಶಾರೋಹಣ ನೆರವೇರಿಸುವರು. ಇಂಚಲ ಸಾಧು ಸಂಸ್ಥಾನ ಮಠದ ಡಾ.ಶಿವಾನಂದ ಭಾರತಿ ಸ್ವಾಮೀಜಿ, ಹುಬ್ಬಳ್ಳಿ ರಾಜ ವಿದ್ಯಾಶ್ರಮದ ಷಡಕ್ಷರಿ ಸ್ವಾಮೀಜಿ, ಚಿಕ್ಕಮುನವಳ್ಳಿ ಆರೂಢ ಮಠದ ಶಿವಪುತ್ರ ಸ್ವಾಮೀಜಿ, ಬಿಳಕಿ ರುದ್ರಸ್ವಾಮಿ ಮಠದ ಚನ್ನಬಸವ ದೇವರು, ಬಸವರಾಜ ಸ್ವಾಮೀಜಿ, ಶಿವಪುತ್ರ ಸ್ವಾಮೀಜಿ, ನಿಜಗುಣಾನಂದ ಸ್ವಾಮೀಜಿ, ಹುಣಶ್ಯಾಳದ ನಿಜಗುಣ ದೇವರು ಸಾನ್ನಿಧ್ಯ ವಹಿಸುವರು.
ಶಾಸಕರಾದ ವಿಠ್ಠಲ ಹಲಗೇಕರ, ಬಾಬಾಸಾಹೇಬ ಪಾಟೀಲ, ಮಾಜಿ ಶಾಸಕರಾದ ಅರವಿಂದ ಪಾಟೀಲ, ಮಹಾಂತೇಶ ದೊಡಗೌಡರ, ಜಿಪಂ ಮಾಜಿ ಸದಸ್ಯೆ ರೋಹಿಣಿ ಪಾಟೀಲ, ಮೋಹನ ಸಂಬರಗಿ,
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net