ಶಿವಶಂಕರ ಸ್ವಾಮೀಜಿ ಲಿಂಗೈಕ್ಯ

ಶಿವಶಂಕರ ಸ್ವಾಮೀಜಿ
ಶಿವಶಂಕರ ಸ್ವಾಮೀಜಿ
Published on
ರಾಯಬಾಗ: ತಾಲೂಕಿನ ಬಾವನಸೌಂದತ್ತಿ ಗ್ರಾಮದ ಓಂಕಾರ ಆಶ್ರಮದ ಶಿವಶಂಕರ ಸ್ವಾಮೀಜಿ (63) ಬುಧವಾರ ಬೆಳಗ್ಗೆ ಹೃದಯಾಘಾತದಿಂದ ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಪೂಜ್ಯರ ಮೃತದೇಹವನ್ನು ಮಹಾದೇವ ಮಂದಿರದ ಆವರಣದಲ್ಲಿ ಜ.22ರ ಬೆಳಗ್ಗೆ 8 ಗಂಟೆವರೆಗೆ ಅಂತಿಮ ದರ್ಶನಕ್ಕಾಗಿ ಇಡಲಾಗುವುದು.
ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ತೆರಳಿ ಬೆಳಗ್ಗೆ 10.30ಕ್ಕೆ ವೀರಶೈವ-ಲಿಂಗಾಯತ ವಿಧಿ ಪ್ರಕಾರ ಓಂಕಾರ ಆಶ್ರಮದ ಆವರಣದಲ್ಲಿ ಅಂತಿಮ ವಿಧಿ ನೆರವೇರಿಸುವುದಾಗಿ ನಂದಿಕುರಳಿ ಪಂಚಲಿಂಗೇಶ್ವರ ವೀರಭದ್ರೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net