ಶಿಂಪಿ ಸಮುದಾಯದ ಕಾರ್ಯ ಮಾದರಿ

ಬೈಲಹೊಂಗಲ ನಗರದಲ್ಲಿ ವಿಠ್ಠಲ-ರುಕ್ಮಿಣಿ ಸಮುದಾಯ ಭವನವನ್ನು ಗಣ್ಯರು ಉದ್ಘಾಟಿಸಿದರು. ಪ್ರಭು ನೀಲಕಂಠ ಸ್ವಾಮೀಜಿ, ಮಹಾಂತೇಶ ಕೌಜಲಗಿ,  ನಾರಾಯಣ ಕೋಪರ್ಡೆ, ಡಾ.ನಯನಾ ಭಸ್ಮೆ, ವಿಜಯ ಮೆಟಗುಡ್ಡ ಇತರರಿದ್ದರು.
ಬೈಲಹೊಂಗಲ ನಗರದಲ್ಲಿ ವಿಠ್ಠಲ-ರುಕ್ಮಿಣಿ ಸಮುದಾಯ ಭವನವನ್ನು ಗಣ್ಯರು ಉದ್ಘಾಟಿಸಿದರು. ಪ್ರಭು ನೀಲಕಂಠ ಸ್ವಾಮೀಜಿ, ಮಹಾಂತೇಶ ಕೌಜಲಗಿ, ನಾರಾಯಣ ಕೋಪರ್ಡೆ, ಡಾ.ನಯನಾ ಭಸ್ಮೆ, ವಿಜಯ ಮೆಟಗುಡ್ಡ ಇತರರಿದ್ದರು.
Published on
ನಗರದ ಹೊಸೂರ ರಸ್ತೆಯಲ್ಲಿ ವಿಠ್ಠಲ-ರುಕ್ಮಿಣಿ ಸಮುದಾಯ ಭವನ ಶನಿವಾರ ಉದ್ಘಾಟಿಸಿ ಮಾತನಾಡಿ, ಸಮುದಾಯ ಸಣ್ಣದಾಗಿದ್ದರೂ ಸರ್ಕಾರ ಸಹಾಯಧನ ಹಾಗೂ ದಾನಿಗಳ ಸಹಕಾರ ಲವಾಗಿ ನಗರದಲ್ಲಿ ವಿಠ್ಠಲ-ರುಕ್ಮಿಣಿ ಸಮುದಾಯ ಭವನ ನಿರ್ಮಿಸಿರುವ ಕಾರ್ಯ ಮಾದರಿಯಾಗಿದೆ. ಸಮುದಾಯ ಏಳಿಗೆಗೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಪಂಢರಪುರದ ಗುರು ಹರಿಭಾವ ರಾಮಭಾವು ಬೋರಾಟೆ, ಶಾಖಾ ಮೂರುಸಾವಿರ ಮಠದ ಪ್ರಭು ನೀಲಕಂಠ ಸ್ವಾಮೀಜಿ ಹಾಗೂ ಭಗಳಂಭದೇವಿ ದೇವಸ್ಥಾನದ ಧರ್ಮಾಧಿಕಾರಿ ಡಾ.ವೀರಯ್ಯ ಹಿರೇಮಠ ಸ್ವಾಮೀಜಿ, ಪ್ರತಿಯೊಬ್ಬರೂ ಧಾರ್ಮಿಕ ಭಾವನೆ ಅರಿತು ನಡೆದಾಗ ಬದುಕು ಪಾವನವಾಗಲಿದೆ ಎಂದು ತಿಳಿಸಿದರು. ರಾಜ್ಯ ನಾಮದೇವ ಶಿಂಪಿ ಸಮುದಾಯದ ಅಧ್ಯಕ್ಷ ನಾರಾಯಣ ಕೋಪರ್ಡೆ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಡಾ.ನಯನಾ ಭಸ್ಮೆ ಮಾತನಾಡಿ, ಸಮಾಜ ಸಂಘನೆಯಲ್ಲಿ ಹಿರಿಯರ ಮಾರ್ಗದರ್ಶನ ಅಗತ್ಯವಾಗಿದೆ ಎಂದರು.
ಉದ್ಯಮಿ ವಿಜಯ ಮೆಟಗುಡ್ಡ, ಪತ್ರಕರ್ತ ಈಶ್ವರ ಹೋಟಿ ಮಾತನಾಡಿದರು. ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಕೀರ್ತನಕಾರ ಸುರೇಶ ಕಾಮಕರ, ಮಹಾಂತೇಶಶಾಸಿ ಆರಾದ್ರಿಮಠ, ನಾಮದೇವ ಶಿಂಪಿ ಸಮುದಾಯದ ತಾಲೂಕಾಧ್ಯಕ್ಷ ಅಣ್ಣಪ್ಪ ಜೊಂಜಾಳೆ, ಪುರಸಭೆ ಮಾಜಿ ಅಧ್ಯಕ್ಷ ರಾಜಶೇಖರ ಮೂಗಿ, ಬಸವರಾಜ ಜನ್ಮಟ್ಟಿ, ವಿಜಯ ಬೋಳಣ್ಣವರ, ಅಕ್ಷತಾ ಮಾಡಲಗಿ, ಪುರಸಭೆ ಮಾಜಿ ಸದಸ್ಯ ಅಂಜನಾ ಬೊಂಗಾಳೆ, ರತ್ನಮಾಲಾ ಮೂಳೆ ಇತರರಿದ್ದರು. ನಿವೃತ್ತ ಶಿಕ್ಷಕ ಅರುಣ ಹೋಮಕರ ಸ್ವಾಗತಿಸಿದರು.
ಮೀನಾಕ್ಷಿ ಕಾಮಕರ ನಿರೂಪಿಸಿದರು. ವಿಶ್ವನಾಥ ಮಹೇಂದ್ರಕರ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net