ಹುಕ್ಕೇರಿ ತಾಲೂಕಿನಲ್ಲಿ ಕುರಿಗಳ್ಳರ ಹಾವಳಿ

ಕುರಿಗಳ್ಳ
ಕುರಿಗಳ್ಳ
Published on
ಚಿಕ್ಕೋಡಿ: ಹುಕ್ಕೇರಿ ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಕುರಿಗಳ್ಳರ ಹಾವಳಿ ಹೆಚ್ಚಾಗಿದ್ದು, ಜಾನುವಾರು ಕೊಠಡಿ ಬಾಗಿಲು ಮುರಿದು ಕಳವು ಮಾಡುತ್ತಿದ್ದಾರೆ.
ಯಮಕನಮರಡಿ ಠಾಣೆ ವ್ಯಾಪ್ತಿಯ ಗುಡಗನಟ್ಟಿ ಗ್ರಾಮದ ಭರಮಾ ಅಳಗುಂಡಿ ಅವರಿಗೆ ಸೇರಿದ 3, ಮಾನಗಾವ ಗ್ರಾಮದ ಕೆಂಪಣ್ಣ ಪರಮಾಜ ಅವರ 4 ಹಾಗೂ ರೇಷ್ಮಾ ಮಾನಗಾವಕರ ಅವರ 2 ಕುರಿ ಕಳವು ಮಾಡಲಾಗಿದ್ದು, ಇನ್ನೂ ಹಲವಡೆಯೂ ಕಳವು ಪ್ರಕರಣಗಳು ನಡೆದಿವೆ.
ಈ ಕುರಿತು ಯಮಕನಮರಡಿ ಠಾಣೆ ಪೊಲೀಸರಿಗೆ ದೂರು ನೀಡಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ರೇಷ್ಮಾ, ಈರಪ್ಪ, ಭರಮಾ ಆರೋಪಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net