ಜಾತಿ ತೊಲಗಿಸಲು ಶ್ರಮಿಸಿದ ಶರಣರು

ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ ಜಯಂತಿ ಕಾರ್ಯಕ್ರಮದಲ್ಲಿ ಡಾ.ಎಚ್.ಐ.ತಿಮ್ಮಾಪುರ ಮಾತನಾಡಿದರು. ಮಲ್ಲೇಶ ಚೌಗುಲೆ, ಅನಂತಕುಮಾರ ಬ್ಯಾಕೂಡ, ಭೀಮರಾವ್ ಪವಾರ ಇತರರಿದ್ದರು.
ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ ಜಯಂತಿ ಕಾರ್ಯಕ್ರಮದಲ್ಲಿ ಡಾ.ಎಚ್.ಐ.ತಿಮ್ಮಾಪುರ ಮಾತನಾಡಿದರು. ಮಲ್ಲೇಶ ಚೌಗುಲೆ, ಅನಂತಕುಮಾರ ಬ್ಯಾಕೂಡ, ಭೀಮರಾವ್ ಪವಾರ ಇತರರಿದ್ದರು.
Published on
ಬೆಳಗಾವಿ: ಹನ್ನೆರಡನೇ ಶತಮಾನದಲ್ಲಿ ಬಸವಣ್ಣವರು ಸೇರಿ ಎಲ್ಲ ಶರಣರು ಜಾತಿಯತೆ ಹೋಗಲಾಡಿಸಲು ಶ್ರಮಿಸಿದ್ದಾರೆ ಎಂದು ಅಂಜುಮನ್ ಪದವಿ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಡಾ.ಎಚ್.ಐ.ತಿಮ್ಮಾಪುರ ಹೇಳಿದರು. ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶರಣರಾದ ಮಾದಾರ ಚೆನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಹಾಗೂ ಉರಿಲಿಂಗ ಪೆದ್ದಿ ಅವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಹುಟ್ಟಿನಿಂದ ಯಾರೂ ನೀಚರೂ ಅಲ್ಲ, ಶ್ರೇಷ್ಠರೂ ಅಲ್ಲ. ಅವರವರ ನಡತೆಯಿಂದ ಅವರ ಕುಲ ನಿರ್ಧಾರವಾಗುತ್ತದೆ ಎಂದು ಶರಣರು ಪ್ರತಿಪಾದಿಸಿದ್ದರು. ಕಾಯಕವಿಲ್ಲದ, ಶ್ರಮವಿಲ್ಲದವರು ಶರಣರಲ್ಲ ಎಂದರು. ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಮಲ್ಲೇಶ ಚೌಗುಲೆ, ಅನಂತಕುಮಾರ ಬ್ಯಾಕೂಡ, ಭೀಮರಾವ್ ಪವಾರ, ವಿಠ್ಠಲ ಪೋಳ, ಕರೆಪ್ಪ ಗುಡೆನ್ನವರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net