ನಿಯಮ ಪಾಲನೆಯಿಂದ ಜೀವ ರಕ್ಷಣೆ

ಸುರೇಬಾನದಲ್ಲಿ ಪೊಲೀಸ್ ಠಾಣೆ ಕಟ್ಟಡ ನಿರ್ಮಾಣಕ್ಕೆ ಅಶೋಕ ಪಟ್ಟಣ ಭೂಮಿಪೂಜೆ ನೆರವೇರಿಸಿದರು. ಆರ್.ಬಿ.ಬಸರಗಿ, ಬಿ.ಎಂ.ಪಾಟೀಲ ಇತರರಿದ್ದರು.
ಸುರೇಬಾನದಲ್ಲಿ ಪೊಲೀಸ್ ಠಾಣೆ ಕಟ್ಟಡ ನಿರ್ಮಾಣಕ್ಕೆ ಅಶೋಕ ಪಟ್ಟಣ ಭೂಮಿಪೂಜೆ ನೆರವೇರಿಸಿದರು. ಆರ್.ಬಿ.ಬಸರಗಿ, ಬಿ.ಎಂ.ಪಾಟೀಲ ಇತರರಿದ್ದರು.
Published on
ತಾಲೂಕಿನ ಸುರೇಬಾನ ಪೊಲೀಸ್ ಠಾಣೆಗೆ 1.80 ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಪೊಲೀಸರು ಹೆಲ್ಮೆಟ್ ಹಾಕುವಂತೆ ಸೂಚಿಸಿದರೂ ಧರಿಸದೇ ವಾಹನ ಚಲಾಯಿಸುವುದು ಸರಿಯಲ್ಲ. ಕಾನೂನು ಪಾಲನೆಯಿಂದ ಅಮೂಲ್ಯವಾದ ಜೀವ ರಕ್ಷಣೆಯಾಗುತ್ತದೆ ಎಂದರು.
ಬೆಳಗಾವಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಬಿ.ಬಸರಗಿ ಮಾತನಾಡಿ, ಅಶೋಕ ಪಟ್ಟಣ ಅವರ ಪ್ರಯತ್ನದ ಲವಾಗಿ ಸುರೇಬಾನ ಪೊಲೀಸ್ ಠಾಣೆಗೆ ಸಿಬ್ಬಂದಿ ಹಾಗೂ ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದೆ ಎಂದರು.
ಗುತ್ತಿಗೆದಾರ ಬಿ.ಎಂ.ಪಾಟೀಲ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ.ಬಿ.ರಂಗನಗೌಡ್ರ, ಮುಖಂಡರಾದ ಪರಪ್ಪ ಜಂಗವಾಡ, ಜಿ.ಎಚ್.ಹಣಸಿ, ಸಿದ್ದಲಿಂಗಪ್ಪ ಸಿಂಗಾರಗೊಪ್ಪ, ಜಹೂರ್ ಹಾಜಿ, ಸುರೇಬಾನ ಅಶ್ರ್ ಬಂದಗಿ, ವಿನಾಯಕ ಬಡಿಗೇರ, ಸುರೇಶ ಬೆಂಡೆಗುಂಬಳ, ಸವಿತಾ ಮುನ್ಯಾಳ, ಗುರುರಾಜ ಕಲಬುರಗಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net