ಅಣ್ಣಾಸಾಹೇಬ ಜೊಲ್ಲೆ ಸ್ವತಂತ್ರ ಪಿಯು ವಿಜ್ಞಾನ ವಸತಿ ಮಹಾವಿದ್ಯಾಲಯದಲ್ಲಿ 2026-27ನೇ ಸಾಲಿಗೆ ಪ್ರಥಮ ಪಿಯುಸಿಯಲ್ಲಿ ಪ್ರವೇಶ ಪಡೆಯಲು 400 ವಿದ್ಯಾರ್ಥಿಗಳಿಗೆ ಅವಕಾಶವಿದೆ. ಜಿಲ್ಲೆಯ 8 ಕೇಂದ್ರಗಳಲ್ಲಿ ಪ್ರವೇಶ ಪರೀಕ್ಷೆ ನಡೆಸಲಾಗುವುದು. ಜ.4ರಂದು ಬೆಳಗ್ಗೆ 10 ಗಂಟೆಗೆ ನಗರದ ಜೊಲ್ಲೆ ಶಿಕ್ಷಣ ಸಂಸ್ಥೆ ಆವರಣ, ಮಧ್ಯಾಹ್ನ 12 ಗಂಟೆಗೆ ನಣದಿಯ ಜೊಲ್ಲೆ ಶಿಕ್ಷಣ ಸಂಸ್ಥೆ ಆವರಣದಲ್ಲಿ ಏರ್ಪಡಿಸಲಾಗಿದೆ. ಇನ್ನುಳಿದ ಪರೀಕ್ಷಾ ಕೇಂದ್ರಗಳ ಮಾಹಿತಿ, ದಿನಾಂಕ, ಸಮಯವನ್ನು ಕಾಲೇಜಿನ ಜಾಲತಾಣದಲ್ಲಿ (ವೆಬ್‌ಸೈಟ್) ಪ್ರಕಟಿಸಲಾಗುವುದು ಎಂದರು.