ಪಟ್ಟಣದಲ್ಲಿ ವಾರ್ಷಿಕೋತ್ಸವ ನಿಮಿತ್ತ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಜ.24ರಂದು ಬೃಹತ್ ಉದ್ಯೋಗ ಮೇಳ ಜರುಗುವುದು. ಜ.25ರಂದು ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ಜ.24ರಿಂದ 27ರವರೆಗೆ ಸ್ವಚ್ಛ ಚಿಕ್ಕೋಡಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಜ.26ರಂದು ಸಿಎಲ್‌ಇ ಸಂಸ್ಥೆ ಆವರಣದಲ್ಲಿ ಕಬಡ್ಡಿ ಪಂದ್ಯಾವಳಿ, ಜ.28ರಂದು ಬೆಳಗ್ಗೆ 7 ಗಂಟೆಗೆ ಸಂಪಾದನ ಚರಮೂರ್ತಿ ಮಠದ ಸಂಪಾದನಾ ಶ್ರೀ ಧ್ವಜಾರೋಹಣ ನೆರವೇರಿಸುವರು. 8.30ಕ್ಕೆ ಶತ ಚಂಡಿಯಾಗ, ನೃತ್ಯ ಕಲಾ ಪ್ರದರ್ಶನ, ಮಹಿಳೆಯರಿಂದ ಸಹಸ್ರನಾಮ ಪಠಣ, ಮಹಿಳೆಯರಿಗಾಗಿ ವಿಚಾರ ಸಂಕಿರಣ, ಜ.29ರಂದು ಮಂಡಲ ಪೂಜೆ, ತಾಯಿಯಂದಿರ ಪಾದಪೂಜೆ, ಆಹಾರಮೇಳ, ಜ.30ರಂದು ಉಚಿತ ಸಾಮೂಹಿಕ ವಿವಾಹ, ಸಂಗೀತ ಸಂಜೆ ಕಾರ್ಯಕ್ರಮ ಜರುಗುವುದು ಎಂದರು.